Mushfiqur Rahim : ಟಿ20 ಅಂತರಾಷ್ಟ್ರೀಯ ಕ್ರಿಕೆಟ್​ಗೆ ಬಾಂಗ್ಲಾದ ಮಾಜಿ ನಾಯಕ ನಿವೃತ್ತಿ

mushfiqur rahim

ಅಂತರಾಷ್ಟ್ರೀಯ ಮಟ್ಟದ ಟಿ-20 ಕ್ರಿಕೆಟ್​ಗೆ ಬಾಂಗ್ಲಾದೇಶದ ಮಾಜಿ ನಾಯಕ ಹಾಗೂ ವಿಕೆಟ್ ಕೀಪರ್ ಮುಶ್ಫಿಕರ್ ರಹೀಮ್ (Mushfiqur Rahim) ನಿವೃತ್ತಿ ಘೋಷಣೆ ಮಾಡಿದ್ದಾರೆ. ಏಕದಿನ ಪಂದ್ಯ ಮತ್ತು ಟೆಸ್ಟ್​ಗಳಲ್ಲಿ ತಮ್ಮ ಆಟ ಮುಂದುವರೆಸಲಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಏಷ್ಯಾ ಕಪ್​ನಲ್ಲಿ ಮುಶ್ಫಿಕರ್ ರಹೀಮ್ (Mushfiqur Rahim) ಎರಡೂ ಪಂದ್ಯಗಳಲ್ಲಿ ಆಡಿದ್ದಾರೆ. ಆದರೆ, ಶೇಕ್ ಅಲ್ ಹಸನ್ ನಾಯಕತ್ವದ ತಂಡ ಸೂಪರ್ 4 ಹಂತಕ್ಕೆ ತಲುಪುವಲ್ಲಿ ಸೋತಿದೆ. ಆಡಿದ 2 ಪಂದ್ಯಗಳಲ್ಲಿ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ತಂಡಗಳ ವಿರುದ್ಧ ಸೋಲು ಅನುಭವಿಸಿದೆ.

ಈ ಬಗ್ಗೆ ಪ್ರಕಟಣೆ ಬಿಡುಗಡೆಹೊರಡಿಸಿರುವ ಮುಶ್ಫಿಕರ್ ರಹೀಮ್, ಏಕದಿನ ಪಂದ್ಯ ಮತ್ತು ಟೆಸ್ಟ್​ ಪಂದ್ಯಗಳ ಕಡೆ ನನ್ನ ಗಮನ ಹರಿಸಲು ಅಂತರಾಷ್ಟ್ರೀಯ ಟಿ-20 ಪಂದ್ಯಗಳಿಗೆ ನಿವೃತ್ತಿ ಘೋಷಣೆ ಮಾಡುತ್ತಿದ್ದೇನೆ. ಆದಾಗ್ಯೂ, ಅವಕಾಶ ಒದಗಿ ಬಂದ್ರೆ ಪ್ರಾಂಚೈಸಿ ಲೀಗ್​ಗಳಲ್ಲಿ ಭಾಗವಹಿಸುತ್ತೇನೆ ಎಂದು ಹೇಳಿದ್ದಾರೆ.

ಬಾಂಗ್ಲಾದೇಶದ ಕ್ರಿಕೆಟ್ ತಂಡದ ತಮೀಮ್ ಇಕ್ಭಾಲ್ ಜುಲೈನಲ್ಲಿ ಟಿ-20 ಪಂದ್ಯಗಳಿಗೆ ನಿವೃತ್ತಿ ಘೋಷಣೆ ಮಾಡಿದ್ದರು. ಇದೀಗ, ಮುಶ್ಫಿಕರ್ ರಹೀಮ್ ಎರಡನೆಯವರಾಗಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಏಷ್ಯಾಕಪ್​ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಇವರು ಅಫ್ಘಾನಿಸ್ತಾನದ ವಿರುದ್ಧ ಕೇವಲ 1 ರಂದು ಹಾಗೂ ಶ್ರೀಲಂಕಾ ವಿರುದ್ಧ ಕೇಔಲ 4 ರಂದು ಗಳಿಸಿದ್ದಾರೆ.

ರಹೀಮ್ ಬಾಂಗ್ಲಾದೇಶದ ಕ್ರಿಕೆಟ್ ತಂಡವನ್ನು 102 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ಆ ಮೂಲಕ 1,500 ರನ್ ಗಳಿಸಿದ್ದಾರೆ. ಒವರ ಬ್ಯಾಟಿಂಗ್ ಸರಾಸರಿ 19.48 ಆಗಿದೆ.

ಟಿ-20 ಕ್ರಿಕೆಟ್​ನಲ್ಲಿ ರಹೀಮ್ ವಿಕೆಟ್ ಪತನವಿಲ್ಲದೇ 72 ರನ್ ಗಳಿಸಿರುವುದು ಶ್ರೇಷ್ಟವಾಗಿದೆ. ಟಿ-2ಒ ಕ್ರಿಕೆಟ್​ನಲ್ಲಿ ಇವರ ಸ್ಟ್ರೈಕ್ ರೇಟ್​ 115.03 ಇದೆ.

LEAVE A REPLY

Please enter your comment!
Please enter your name here