ಸ್ವಾಮೀಜಿ ಪೊಲೀಸ್​​ ಕಸ್ಟಡಿ ಕೇಳದ ತನಿಖಾಧಿಕಾರಿ – ತನಿಖೆ ಮುಗಿಯಿತೇ – ಪ್ರಶ್ನಿಸಿದ ನ್ಯಾಯಾಧೀಶರು

Shivamurthy Murugha Sharanaru
Dr.Shivamurthy Murugha Sharanaru
ಜೈಲಿಗೆ ಸ್ವಾಮೀಜಿ:
ಮಠದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಮುರುಘಾ ಮಠದ (Murugha Mutt Swamiji) ಡಾ ಶಿವಮೂರ್ತಿ ಮುರುಘಾ ಶರಣರನ್ನು (Sri Shivamurthy Murugha Sharanaru) ನ್ಯಾಯಾಲಯ ಮತ್ತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಕಸ್ಟಡಿ ಕೇಳದ ಪೊಲೀಸರು:
ಪ್ರಕರಣದಲ್ಲಿ ಇನ್ನೂ ಹೆಚ್ಚಿನ ವಿಚಾರಣೆಗಾಗಿ ಸ್ವಾಮೀಜಿ ಅವರನ್ನು ತಮ್ಮ ಕಸ್ಟಡಿಗೆ ನೀಡುವಂತೆ ಪೊಲೀಸರು ನ್ಯಾಯಾಲಯದಲ್ಲಿ ಕೋರಿಕೆ ಸಲ್ಲಿಸಿಲ್ಲ. ಇದುವರೆಗೂ ಪೊಲೀಸರು ಸ್ವಾಮೀಜಿ ಅವರ ಕಸ್ಟಡಿಯನ್ನು ಕೇಳಿಲ್ಲ.
ಈ ಹಿನ್ನೆಲೆಯಲ್ಲಿ ಚಿತ್ರದುರ್ಗ (Chitradurga) 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಕೋಮಲಾ ಅವರು ಸೆಪ್ಟೆಂಬರ್​ 14ರವರೆಗೆ ಮತ್ತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.
ತನಿಖೆ ಮುಗಿಯಿತೇ..?:
ಎಲ್ಲ ತನಿಖೆಯೂ ಮುಗಿಯಿತೇ ಎಂದು ತನಿಖಾಧಿಕಾರಿಯನ್ನು ನ್ಯಾಯಾಧೀಶರು ಪ್ರಶ್ನಿಸಿದರು.
ಸ್ವಾಮೀಜಿ ಅವರನ್ನು ಚಿತ್ರದುರ್ಗ ಕಾರಾಗೃಹಕ್ಕೆ ರವಾನೆ ಮಾಡಲಾಗುತ್ತದೆ.
ರಶ್ಮಿ ಕಸ್ಟಡಿ ಕೇಳಿದ ಪೊಲೀಸರು:
ಇತ್ತ ಪ್ರಕರಣದಲ್ಲಿ 2ನೇ ಆರೋಪಿ ಆಗಿರುವ ಅವರನ್ನು 7 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ನೀಡುವಂತೆ ಕೋರ್ಟ್​​ಗೆ ತನಿಖಾಧಿಕಾರಿ ಅರ್ಜಿ ಸಲ್ಲಿಸಿದ್ದಾರೆ.
ಸದ್ಯ ಈಕೆ ಶಿವಮೊಗ್ಗ ಜೈಲಿನಲ್ಲಿದ್ದಾರೆ. ಸ್ವಾಮೀಜಿ ಮತ್ತು ರಶ್ಮಿ ಇಬ್ಬರನ್ನೂ ಸೆಪ್ಟೆಂಬರ್​ 14ರಂದು ಕೋರ್ಟ್​​ಗೆ ಹಾಜರುಪಡಿಸುವಂತೆ ನ್ಯಾಯಾಧೀಶರು ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here