ಅಟಾರ್ನಿ ಜನರಲ್ ಆಗಿ ಮುಕುಲ್ ರೋಹಟಗಿ ಮತ್ತೊಮ್ಮೆ ನೇಮಕ

Mukul Rohatgi

ಮುಕುಲ್ ರೋಹಟಗಿ (Mukul Rohatgi) ಅವರನ್ನು ಭಾರತದ ಅಟಾರ್ನಿ ಜನರಲ್ ಆಗಿ ಮತ್ತೊಮ್ಮೆ ನೇಮಕ ಮಾಡಲಾಗಿದೆ. ಅವರು ಅಕ್ಟೋಬರ್ 1 ರಿಂದ ಅಟಾರ್ನಿ ಜನರಲ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ಅಟಾರ್ನಿ ಜನರಲ್ ಆಗಿರುವ ಕೆ.ಕೆ. ವೇಣುಗೋಪಾಲ ಅವರ ಅಧಿಕಾರಾವಧಿಯು ಸೆಪ್ಟೆಂಬರ್ 30 ಕ್ಕೆ ಕೊನೆಗೊಳ್ಳಲಿದ್ದು, ಅವರ ಸ್ಥಾನಕ್ಕೆ ರೋಹಟಗಿ ಅವರನ್ನು ನೇಮಕ ಮಾಡಲಾಗಿದೆ.

ರೋಹಟಗಿ ಅವರು ಈ ಹಿಂದೆ ಜೂನ್ 2014 ರಲ್ಲಿ ಅಟಾರ್ನಿ ಜನರಲ್ ಆಗಿ ನೇಮಕಗೊಂಡು. ಜೂನ್ 2017ರ ವರೆಗೆ ಸೇವೆ ಸಲ್ಲಿಸಿದರು. ಇದೀಗ ರೋಹಟಗಿ ಅವರನ್ನು ಮತ್ತೊಮ್ಮೆ ನೇಮಕ ಮಾಡಲಾಗಿದೆ.

ಪ್ರಸ್ತುತ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರ ಸೇವೆ ಜೂನ್ 30 ರಂದು ಕೊನೆಗೊಳ್ಳುತ್ತಿತ್ತು. ಆದರೆ, ಅವರ ಸೇವೆಯನ್ನು ವಿಸ್ತರಿಸಲಾಗಿತ್ತು.

ಮುಕುಲ್ ರೋಹಟಗಿ (Mukul Rohatgi) ಅವರು ಅಕ್ಟೋಬರ್ 1, 2022 ರಿಂದ ಅಟಾರ್ನಿ ಜನರಲ್ ಆಗಿ ತಮ್ಮ ಎರಡನೇ ಅವಧಿಯನ್ನು ಪ್ರಾರಂಭಿಸಲಿದ್ದಾರೆ. ಇದನ್ನೂ ಓದಿ : ಕೃಷಿ ಕಾಯ್ದೆಗಳಿಗೆ ಸುಪ್ರೀಂಕೋರ್ಟ್​ ತಡೆ – ಸುಪ್ರೀಂಕೋರ್ಟ್​ ರಚಿಸಿದ ಸಮಿತಿಯಲ್ಲಿ ನಾಲ್ವರೂ ಸರ್ಕಾರದ ಪರ..!

LEAVE A REPLY

Please enter your comment!
Please enter your name here