ಕೆಜಿಎಫ್, RRR ಸಿನಿಮಾಗಳ ಸಕ್ಸಸ್ ಬಳಿಕ ಸೌತ್ ಸಿನಿ ದುನಿಯಾದಲ್ಲಿ ಸಾಲು ಸಾಲು ಪ್ಯಾನ್ ಇಂಡಿಯಾ ಸಿನಿಮಾಗಳು ಸೆಟ್ಟೇರುತ್ತಿವೆ. ಈ ಪಟ್ಟಿಗೀಗ ಕೀಡಾ ಕೋಲಾ (Keeda cola) ಚಿತ್ರ ಸೇರ್ಪಡೆಯಾಗುತ್ತಿದೆ.
ತೆಲುಗು ಚಿತ್ರರಂಗದ ಯಂಗ್ ಅಂಡ್ ಟ್ಯಾಲೆಂಟೆಡ್ ಡೈರೆಕ್ಟರ್, ಪೆಳ್ಳಿ ಚೂಪುಲು ಹಾಗೂ ಈ ನಗಾರಾನಿಕಿ ಏಮೈಂದಿ ಎಂಬ ಎರಡು ಯಶಸ್ವಿ ಸಿನಿಮಾ ನಿರ್ದೇಶಿಸಿರುವ ತರುಣ್ ಭಾಸ್ಕರ್ ಧಾಸ್ಯಮ್ ಸಾರಥ್ಯದಲ್ಲಿ ಕೀಡಾ ಕೋಲಾ(Keeda cola) ಎಂಬ ಹೊಸ ಚಿತ್ರ ತಯಾರಾಗ್ತಿದೆ. ಯೂತ್ ಫುಲ್ ಎಂಟ್ರೈನರ್ ಸಿನಿಮಾ ನಿರ್ದೇಶಿಸ್ತಿದ್ದ ತರುಣ್ ಈ ಬಾರಿ ಕೀಡ ಕೋಲಾ ಎಂಬ ಕ್ರೈಮ್ ಕಾಮಿಡಿ ಚಿತ್ರವನ್ನು ಸಿನಿಮಾ ಪ್ರೇಮಿಗಳಿಗೆ ಅರ್ಪಿಸಲು ಅಣಿಯಾಗ್ತಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ‘ಲೈಗರ್’ ಕ್ರೇಜ್ – ಅಭಿಮಾನಿಗಳ ಪ್ರೀತಿಗೆ ವಿಜಯ್ ದೇವರಕೊಂಡ ಕ್ಲೀನ್ ಬೋಲ್ಡ್
ವಿಜಿ ಸಿನ್ಮಾ ಬ್ಯಾನರ್ನಲ್ಲಿ ಪ್ರೊಡಕ್ಷನ್ ಅಡಿಯಲ್ಲಿ ಪ್ರೊಡಕ್ಷನ್ ನಿರ್ಮಾಣವಾಗಲಿರುವ ಈ ಚಿತ್ರದ ಮುಹೂರ್ತ ಅದ್ಧೂರಿಯಾಗಿ ಹೈದ್ರಾಬಾದ್ ನಲ್ಲಿ ನೆರವೇರಿದೆ. ನಿರ್ಮಾಪಕ ಸುರೇಶ್ ಬಾಬು, ನಾಯಕರಾದ ಸಿದ್ಧಾರ್ಥ್, ತೇಜ ಸಜ್ಜ, ನಂದು ಸೇರಿದಂತೆ ಹಲವು ಯುವ ನಿರ್ದೇಶಕರು ಈ ಕಾರ್ಯಕ್ರಮಕ್ಕೆ ಭಾಗಿಯಾಗಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಶ್ರೀಪಾದ್ ನಂದಿರಾಜ್, ಸಾಯಿಕೃಷ್ಣ ಗದ್ವಾಲ್, ಉಪೇಂದ್ರ ವರ್ಮಾ, ವಿವೇಕ್ ಸುಧಾಂಶು ಮತ್ತು ಕೌಶಿಕ್ ನಂದೂರಿ ಈ ಚಿತ್ರ ನಿರ್ಮಾಣ ಮಾಡಲಿದ್ದಾರೆ, ಶೀಘ್ರದಲ್ಲಿ ಸ್ಟಾರ್ ಕಾಸ್ಟ್, ತಾಂತ್ರಿಕ ವರ್ಗ ಫೈನಲ್ ಆಗ್ತಿದ್ದಂತೆ ಚಿತ್ರತಂಡ ಶೂಟಿಂಗ್ ಅಖಾಡಕ್ಕೆ ಧುಮುಕಲಿದೆ. ಎಲ್ಲವೂ ಅಂದುಕೊಂಡಂತೆ ಆದರೆ 2023 ರಲ್ಲಿ ಪ್ಯಾನ್ ಇಂಡಿಯಾ ಚಿತ್ರ ಕೀಡಾ ಕೋಲಾ ತೆರೆಗೆ ಬರಲಿದೆ.
ಇದನ್ನೂ ಓದಿ : ರಾಜಮೌಳಿ ಕುರಿತ ಎರಡು ಇಂಟ್ರೆಸ್ಟಿಂಗ್ ವಿಷಯ