ಮಹೇಂದ್ರ ಸಿಂಗ್ ಧೋನಿ (MS Dhoni) ಅಭಿಮಾನಿಗಳಿಗೆ ಗುಡ್ ನ್ಯೂಸ್ ದೊರಕಿದೆ. ಮುಂದಿನ ಐಪಿಎಲ್ನಲ್ಲಿ ಧೋನಿ ಮತ್ತೊಮ್ಮೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.
2023ರ ಐಪಿಎಲ್ ಸರಣಿಗೆ ನಮ್ಮ ತಂಡವನ್ನು ಧೋನಿಯೇ ಮುನ್ನಡೆಸಲಿದ್ದಾರೆ ಎಂದು ಸಿಎಸ್ಕೆ ತಂಡದ ಸಿಇಒ ಕಾಸಿ ವಿಶ್ವನಾಥನ್ ತಿಳಿಸಿದ್ದಾರೆ.
ಧೋನಿ (MS Dhoni) 2020ರಲ್ಲೇ ಎಲ್ಲ ಅಂತಾರಾಷ್ಟ್ರೀಯ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಹೇಳಿದರೂ ಐಪಿಎಲ್ಗೆ ನಿವೃತ್ತಿ ಹೇಳಿಲ್ಲ. ಕಳೆದ ವರ್ಷದ ಐಪಿಎಲ್ನಲ್ಲೇ ಧೋನಿ ನಿವೃತ್ತಿ ಹೇಳಬಹುದು ಎಂಬ ವದಂತಿ ಹರಡಿತ್ತು. ಆದರೆ ಧೋನಿ ನಿವೃತ್ತಿ ನಿರ್ಧಾರ ಕೈಗೊಂಡಿರಲಿಲ್ಲ.
ಇದನ್ನೂ ಓದಿ : ಆಯುರ್ವೇದ ಚಿಕಿತ್ಸೆಯ ಮೊರ ಹೋದ ಎಂಎಸ್ ಧೋನಿ – ಶುಲ್ಕ ಕೇವಲ 40 ರೂ.
ಕಳೆದ ನವೆಂಬರ್ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದ ಅವರು, ನನ್ನ ಕೊನೆಯ ತವರಿನ ಏಕದಿನ ಪಂದ್ಯ ರಾಂಚಿಯಲ್ಲೇ ನಡೆದಿದ್ದರೆ ನನ್ನ ಕೊನೆಯ ಟಿ20 ಪಂದ್ಯ ಚೆನ್ನೈನಲ್ಲೇ ಇರಬೇಕೆಂದು ಆಶಿಸುತ್ತೇನೆ. ಇದು ಮುಂದಿನ ವರ್ಷ ಆಗಿರುತ್ತಾ ಅಥವಾ ಮುಂದಿನ ಐದು ವರ್ಷದಲ್ಲಿ ಆಗುತ್ತಾ ನಿಜಕ್ಕೂ ಗೊತ್ತಿಲ್ಲ ಎಂದು ಹೇಳಿದ್ದರು.
ಧೋನಿ ನಾಯಕತ್ವದಲ್ಲಿ ಚೆನ್ನೈ ತಂಡ 2010, 2011, 2018, 2021 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಮತ್ತು 2008, 2012, 2013, 2015, 2019ರಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದೆ.
ಇದನ್ನೂ ಓದಿ : ಜೆರ್ಸಿ ನಂ.7 ರ ಗುಟ್ಟು ಬಿಟ್ಟುಕೊಟ್ಟ ಎಂ.ಎಸ್.ಧೋನಿ