GST ತೆರಿಗೆ ಹೊಡೆತ: MPL ಕಂಪನಿಯಿಂದ 350 ನೌಕರರು ವಜಾ

ಆನ್​ಲೈನ್​ ಗೇಮಿಂಗ್​ ಕಂಪನಿ MPL 350 ಮಂದಿ ನೌಕರರನ್ನು ಕೆಲಸದಿಂದ ತೆಗೆಯುವ ನಿರ್ಧಾರ ಪ್ರಕಟಿಸಿದೆ.

ಆನ್​ಲೈನ್​ ಗೇಮಿಂಗ್​ ಮೇಲೆ ಶೇಕಡಾ 28ರಷ್ಟು ಜಿಎಸ್​ಟಿ ತೆರಿಗೆ ವಿಧಿಸುವ ನಿರ್ಧಾರದ ಬೆನ್ನಲ್ಲೇ MPL ನೌಕರಿ ಕಡಿತದ ನಿರ್ಧಾರ ಪ್ರಕಟಿಸಿದೆ.

ನೌಕರಿ ಕಡಿತದ ಬಗ್ಗೆ MPL ಸಹ ಸಂಸ್ಥಾಪಕ ಸಾಯ್​ ಶ್ರೀನಿವಾಸ್​ ಅವರು ಉದ್ಯೋಗಿಗಳಿಗೆ ಮಾಹಿತಿ ನೀಡಿದ್ದಾರೆ.

ಶೇಕಡಾ 28ರಷ್ಟು ಜಿಎಸ್​ಟಿ ತೆರಿಗೆ ಹೇರಿಕೆಯಿಂದ ಕಂಪನಿಯ ಮೇಲಿನ ಭಾರ ಶೇಕಡಾ 350ರಿಂದ 400ರಷ್ಟು ಹೆಚ್ಚಳ ಆಗಲಿದೆ. ಕಂಪನಿ ಶೇಕಡಾ 50ರಿಂದ ಗರಿಷ್ಠ 100ರಷ್ಟು ಭಾರ ಹೆಚ್ಚಳವಾದರೂ ಅದಕ್ಕೆ ಸಿದ್ಧವಾಗಿತ್ತು. ಆದರೆ ದಿಢೀರ್​ ಆಗಿ ಭಾರೀ ಹೆಚ್ಚಳದಿಂದ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಸಾಯ್​ ಶ್ರೀನಿವಾಸ್​ ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here