ಕುವೆಂಪು ರಚಿತ ನಾಡಗೀತೆಗೆ ಧಾಟಿ, ಕಾಲಮಿತಿ ನಿಗದಿಪಡಿಸಿದ ಸರ್ಕಾರ

State Anthem

ರಾಷ್ಟ್ರಕವಿ ಕುವೆಂಪು ರಚಿತ ‘ಜಯ ಭಾರತ ಜನನಿಯ ತನುಜಾತೆ’ (State Anthem) ನಾಡಗೀತೆಗೆ ಹಾಡುವ ಧಾಟಿ ಹಾಗೂ ಕಾಲಮಿತಿಯನ್ನು ನಗದಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

‘ಜಯ ಭಾರತ ಜನನಿಯ ತನುಜಾತೆ’ (State Anthem) ನಾಡಗೀತೆ ಹಾಡಲು ಧಾಟಿ ಹಾಗೂ ಕಾಲಮಿತಿಯನ್ನು ಶಿಫಾರಸ್ಸು ಮಾಡಲು ಶ್ರೀಮತಿ ಎಚ್​.ಆರ್.ಲೀಲಾವತಿಯವರ ಸಮಿತಿಯನ್ನು ಸರ್ಕಾರ ನೇಮಕ ಮಾಡಿತ್ತು. ಈದೀಗ, ಈ ಸಮಿತಿ ವರದಿ ಕೊಟ್ಟಿದ್ದು, ಅನಂತಸ್ವಾಮಿ ರಾಗ ಸಂಯೋಜನೆಯಲ್ಲಿ ನಾಡಗೀತೆಯನ್ನು ಎರಡು ನಿಮಿಷ 30 ಸೆಕೆಂಡುಗಳಲ್ಲಿ ಹಾಡಬೇಕು ಎಂದು ಶಿಫಾರಸ್ಸು ಮಾಡಿದೆ.

ಶ್ರೀಮತಿ ಎಚ್​.ಆರ್.ಲೀಲಾವತಿ ಸಮಿತಿ ನೀಡಿದ ಶಿಫಾರಸ್ಸನ್ನು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ. ಅಲ್ಲದೇ, ಇದೇ ಧಾಟಿಯಲ್ಲಿ ನಾಡಗೀತೆಯನ್ನು ಹಾಡಲು ಧ್ವನಿಸುರುಳಿ ಬಿಡುಗಡೆ ಮಾಡಿದೆ.

ಈ ಬಗ್ಗೆ ಟ್ವೀಟ್ ಮಾಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್​​ ಅಧಿಕೃತವಾಗಿ ಈ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : ಪುನೀತ್ ರಾಜ್​ಕುಮಾರ್ ಜನ್ಮದಿನ ಸ್ಪೂರ್ತಿ ದಿನವಾಗಿ ಆಚರಣೆ : ರಾಜ್ಯ ಸರ್ಕಾರ

LEAVE A REPLY

Please enter your comment!
Please enter your name here