ಸಿನೆಮಾಗಳಿಗೆ ಸಂಬಂಧಿಸಿ ಬಾಕ್ಸ್ ಆಫೀಸ್ ಪರಿಣಿತರು, ರೇಟಿಂಗ್ ನೀಡುವ ಓರ್ ಮ್ಯಾಕ್ಸ್ (Ormax)ಸಂಸ್ಥೆ ನಡೆಸಿದ ಮೋಸ್ಟ್ ಪಾಪ್ಯುಲರ್ ಮೇಲ್ ಸ್ಟಾರ್ (Most popular male star )ಸರ್ವೇಯ ರಿಪೋರ್ಟ್ ಬಹಿರಂಗವಾಗಿದೆ.
ಮೋಸ್ಟ್ ಪಾಪ್ಯುಲರ್ ಮೇಲ್ ಸ್ಟಾರ್
ಟಾಪ್ ಟೆನ್ ಪಟ್ಟಿ (Top 10 list )
ಮೊದಲ ಸ್ಥಾನದಲ್ಲಿ ತಮಿಳು ನಟ ವಿಜಯ್ (Kollywood star Vijay)ಇದ್ದಾರೆ.
ಎರಡನೇ ಸ್ಥಾನದಲ್ಲಿ ತೆಲುಗು ಸ್ಟಾರ್ ನಟ ಪ್ರಭಾಸ್ (Hero Prabhas)ಇದ್ದಾರೆ.
ಮೂರನೇ ಸ್ಥಾನವನ್ನು ಜೂನಿಯರ್ ಎನ್ ಟಿ ಆರ್ (NTR) ಪಡೆದ್ದಾರೆ.
ನಾಲ್ಕನೇ ಸ್ಥಾನವನ್ನು ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್(Allu Arjun) ಪಡೆದುಕೊಂಡಿದ್ದಾರೆ.
ಐದನೇ ಸ್ಥಾನ ಕನ್ನಡ ನಾಡಿನ ಅಪ್ಪಟ ಹುಡುಗ, ಪಾನ್ ಇಂಡಿಯಾ ಸ್ಟಾರ್ ಯಶ್ (Yash)ಪಡೆಯುಕೊಂಡಿದ್ದಾರೆ.
ಆರನೇ ಸ್ಥಾನದಲ್ಲಿ ಅಕ್ಷಯ್ ಕುಮಾರ್(Akshay Kumar), ಏಳನೇ ಸ್ಥಾನದಲ್ಲಿ ರಾಮ್ ಚರಣ್ (RamCharan), ಎಂಟನೇ ಸ್ಥಾನದಲ್ಲಿ ಮಹೇಶ್ ಬಾಬು(Mahesh Babu), ಒಂಬತ್ತನೇ ಸ್ಥಾನದಲ್ಲಿ ಸುರಿಯ (Suria), ಹತ್ತನೇ ಸ್ಥಾನವನ್ನು ಅಜಿತ್ ಕುಮಾರ್ (Ajit Kumar)ಪಡೆದಿದ್ದಾರೆ.
ಇಲ್ಲಿ ಗಮನಿಸಬೇಕಾದ ವಿಚಾರ ಎಂದರೇ ರೌಡಿ ಸ್ಟಾರ್ ವಿಜಯ್ ದೇವರಕೊಂಡ, ದುಲ್ಕರ್ ಸಲ್ಮಾನ್ ಗೆ ಟಾಪ್ 10ಪಟ್ಟಿಯಲ್ಲಿ ಸ್ಥಾನ ಸಿಕ್ಕಿಲ್ಲ ಎನ್ನುವುದು ಅಚ್ಚರಿಯ ವಿಚಾರ.
ಮೋಸ್ಟ್ ಪಾಪ್ಯುಲರ್ ಫೀಮೆಲ್ ಸ್ಟಾರ್ಸ್(Most Popular Female stars )
ಟಾಪ್ 10 ಲಿಸ್ಟ್
1. ಸಮಂತಾ (Samanta )
2. ಅಲಿಯಾ ಭಟ್ (Aliya Bhat)
3. ನಯನ ತಾರಾ (NayanaTara )
4. ಕಾಜಲ್ ಅಗರ್ವಾಲ್(Kajal Agarwal)
5. ದೀಪಿಕಾ ಪಡುಕೋಣೆ (Deepika Padukone)
6. ರಶ್ಮಿಕಾ ಮಂದಣ್ಣ (Rashmika Mandanna)
7. ಕೀರ್ತಿ ಸುರೇಶ್ (Keerti Suresh)
8. ಕತ್ರಿನಾ ಕೈಫ್ (Katrina Kaif)
9. ಪೂಜಾ ಹೆಗ್ಡೆ (Pooja hegde)
10. ಅನುಷ್ಕಾ ಶೆಟ್ಟಿ (Anushka Shetty)
ಟಾಪ್ 10 ಹೀರೋಯಿನ್ ಗಳ ಪಟ್ಟಿಯಲ್ಲಿ ಕರ್ನಾಟಕ ಮೂಲದ ನಟಿಯರ ಸಂಖ್ಯೆ ಹೆಚ್ಚಿದೆ. ಬರೋಬ್ಬರಿ ಐವರು ಸುಂದರಿಯರು ಈ ಪಟ್ಟಿಯಲ್ಲಿ ಇದ್ದಾರೆ. ದೀಪಿಕಾ ಪಡುಕೋಣೆ ಬೆಂಗಳೂರಿನವರಾದರೂ ನೆಲೆ ಕಂಡಿರುವುದು ಬಾಲಿವುಡ್ ನಲ್ಲಿ, ನಯನತಾರ ಬೆಂಗಳೂರಲ್ಲಿ ಜನಿಸಿದರೂ ಸೆಟ್ಲ್ ಆಗಿರುವುದು ಕಾಲಿವುಡ್ ನಲ್ಲಿ.. ರಶ್ಮಿಕಾ ಮಂದಣ್ಣ, ಪೂಜಾ ಹೆಗ್ಡೆ, ಅನುಷ್ಕಾ ಶೆಟ್ಟಿ ಕನ್ನಡಕ್ಕಿಂತ ತೆಲುಗು ಇಂಡಸ್ಟ್ರೀಯಲ್ಲಿ ಹೆಸರು ಮಾಡಿದ್ದಾರೆ.