ಕರ್ನಾಟಕ ರಾಜ್ಯ ಪ್ರೌಢಾ ಶಾಲಾ ಸಹ ಶಿಕ್ಷಕರ ಸಂಘದ ಮೂಡಬಿದ್ರೆ ತಾಲೂಕು ಘಟಕ ಇಂದು ಅವಿರೋಧವಾಗಿ ಆಯ್ಕೆಯಾಗಿದೆ.
ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆದಿದೆ. ಆದರೆ, ಮೂಡಬಿದ್ರೆ ತಾಲೂಕಿನಲ್ಲಿ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಶ್ರೀ ರಾಮಕೃಷ್ಣ ಶಿರೂರು ಅವರು ತಾಲೂಕು ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಶ್ರೀ ನಿತೀಶ್ ಬಲ್ಲಾಳ್ ಅವರು ಕಾರ್ಯದರ್ಶಿಯಾಗಿ, ಶ್ರೀ ಬಾಲಕೃಷ್ಣ ರೇಖ್ಯ ಅವರು ಕೋಶಾಧಿಕಾರಿಯಾಗಿ, ಶ್ರೀಮತಿ ಸೀಮಾ ನಾಯಕ್ ಅವರು ಸಂಘಟನಾ ಕಾರ್ಯದರ್ಶಿಯಾಗಿ ಮತ್ತು ಗಂಗಾಧರ್ ಪಾಟೀಲ್ ಅವರು ರಾಜ್ಯ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.