ಮೂಡಬಿದ್ರೆಯಲ್ಲಿ ಜ್ಞಾನದೀಪ ಟ್ಯುಟೋರಿಯಲ್ ನೂತನ ಸಂಸ್ಥೆ ಇದೇ ಶುಕ್ರವಾರ ಜುಲೈ 15 ರಂದು ಲೋಕಾರ್ಪಣೆಗೊಳ್ಳಲಿದೆ.
ಜ್ಞಾನದೀಪ ಟ್ಯುಟೋರಿಯಲ್ ಸಂಸ್ಥೆ ಈ ವರ್ಷದಿಂದ ಅದ್ದೂರಿಯಾಗಿ ಪ್ರಾರಂಭಗೊಳ್ಳಲಿದೆ. ಜುಲೈ 15 ರಂದು ನಡೆಯಲಿರುವ ಉದ್ಘಾಟನಾ ಸಮಾರಂಭಕ್ಕೆ ವರದರಾಜ್ , ಶಾಸಕ ಉಮಾನಾಥ್ ಕೊಟ್ಯಾನ್, ಮಾಜಿ ಸಚಿವ ಅಭಯ ಚಂದ್ರಜೈನ್, ಕುಲದೀಪ್ ಚೌಟ, ಯುವರಾಜ್ ಜೈನ್ ಮತ್ತಿತರರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.
ಜ್ಞಾನದೀಪ ಟ್ಯುಟೋರಿಯಲ್ ಸಂಸ್ಥೆಯು 5,6 ಮತ್ತು 7 ನೇ ತರಗತಿಯ ಎಲ್ಲಾ ವಿಷಯಗಳಿಗೂ, 8,9 ಮತ್ತು 10 ನೇ ತರಗತಿಯ ಗಣಿತ ಮತ್ತು ವಿಜ್ಞಾನ ಮತ್ತು ಪಿಯುಸಿಯ ಗಣಿತ, ರಸಾಯನಶಾಸ್ತ್ರ, ಜೀವಶಾಸ್ತ್ರ ವಿಷಯಗಳಿಗೆ ತರಬೇತಿ ನೀಡಲಿದೆ. ಕೇಂದ್ರೀಯ ಸಿಲೆಬೆಸ್ ಮತ್ತು ರಾಜ್ಯ ಸಿಲೆಬೆಸ್ಗಳೆರಡಕ್ಕೂ ಜ್ಞಾನದೀಪ ಸಂಸ್ಥೆಯಲ್ಲಿ ಟ್ಯೂಷನ್ ನೀಡಲಾಗುತ್ತದೆ.
ಜ್ಞಾನದೀಪ ಟ್ಯುಟೋರಿಯಲ್ ಸಂಸ್ಥೆಯ ಉದ್ಘಾಟನೆಯನ್ನು ಜುಲೈ 15 ರಂದು ಬೆಳಿಗ್ಗೆ 9.30 ಗಂಟೆಗೆ ಮೂಡಬಿದ್ರೆಯ ಫೈನಾಪಲ್ ಸಿಟಿಯ ಮೊದಲ ಪ್ಲೋರ್ನಲ್ಲಿ ನಡೆಯಲಿದೆ. ಎಲ್ಲರೂ ಕಾರ್ಯಕ್ರಮಕ್ಕೆ ಆಗಮಿಸಬೇಕು ಎಂದು ಸಂಸ್ಥೆಯ ಅಧ್ಯಕ್ಷರಾದ ಪದ್ಮಜಾ ಮಹೇಂದ್ರ ಜೈನ್ ಅವರು ವಿನಂತಿ ಮಾಡಿಕೊಂಡಿದ್ದಾರೆ.