ಯುವವಾಹಿನಿ ಕೇಂದ್ರ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯರು, ಸಂಘಟನಾ ಕಾರ್ಯದರ್ಶಿಗಳು , ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಪ್ರವೀಣ್ ನೆಟ್ಟಾರು ಇವರ ಅಗಲುವಿಕೆಯು ತುಂಬಾ ವಿಷಾದನೀಯ. ಅವರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ. ಅವರ ಕುಟುಂಬದವರಿಗೆ ಅವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ದಯಪಾಲಿಸಲಿ ಎಂದು ಮೂಡಬಿದ್ರೆ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಜಯಕುಮಾರ್ ಶೆಟ್ಟಿ ಪ್ರಾರ್ಥಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕೊಲ್ಲುವ ರಾಕ್ಷಸಿ ಕೃತ್ಯಕ್ಕೆ ನನ್ನ ಧಿಕ್ಕಾರವಿದೆ. ಕೊಲೆಗಡುಕರನ್ನ ಕೂಡಲೇ ಬಂಧಿಸಿ ಉಗ್ರ ಶಿಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸುತ್ತೇನೆ.
ಕೋಮು ಸಂಘರ್ಷದಿಂದಾಗಿ ಅಮಾಯಕರ ಜೀವ ಬಲಿ ತೆಗೆಯುತ್ತಿದ್ದು ಇದಕ್ಕೆ ಜಿಲ್ಲೆಯ ಬುದ್ಧಿವಂತ ಜನರು ಅಂತ್ಯ ಹಾಡಬೇಕಾಗಿದೆ, ರಾಜಕೀಯ ನಾಯಕರ ಉದ್ರೇಕಕಾರಿ ಭಾಷಣ ಹಾಗೂ ಡೋಂಗಿ ಹಿಂದುತ್ವವನ್ನು ಜನರು ಅರಿತುಕೊಳ್ಳಬೇಕಾಗಿದೆ.
ಬುದ್ಧಿವಂತರ ಜಿಲ್ಲೆ ಮತ್ತಷ್ಟು ಕೋಮು ಗಲಭೆಗೆ ಗುರಿಯಾಗದೆ ಶಾಂತಿ ಹಾಗೂ ಸಹಬಾಳ್ವೆಯ, ಸೌಹಾರ್ದತೆಯ ಜೀವನವನ್ನು ನಡೆಸುವಂತಾಗಬೇಕು.
ರಾಜ್ಯ ಸರಕಾರ ಅಪರಾಧಿ ಯಾರೇ ಆದರೂ ಅವರನ್ನು ತಕ್ಷಣ ಬಂಧಿಸಿ ಜನತೆಯ ಮುಂದಿಡಬೇಕು ಎಂದು ಸರಕಾರವನ್ನು ನಾನು ಆಗ್ರಹಿಸುತ್ತೇನೆ.