Money Laundering Case : ಎನ್​ಎಸ್​ಇ ಮಾಜಿ ಸಿಇಓ ಬಂಧನ

Money Laundering Case

ಹಣ ಅಕ್ರಮ ವರ್ಗಾವಣೆ ಪ್ರಕರಣ (Money Laundering Case) ಸಂಬಂಧ ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ನ ಮಾಜಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ(ಸಿಇಒ) ಹಾಗೂ ವ್ಯವಸ್ಥಾಪಕ ನಿರ್ದೇಶಕ ರವಿ ನಾರಾಯಣ್‌ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಮಂಗಳವಾರ ಬಂಧಿಸಿದೆ.

ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ (Money Laundering Case) ಟ್ಯಾಪಿಂಗ್ ಪ್ರಕರಣದಲ್ಲಿ ನಾರಾಯಣ್‌ ಅವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ರವಿ ನಾರಾಯಣ್ 1994ರ ಏಪ್ರಿಲ್‌ನಿಂದ 2013ರ ಮಾರ್ಚ್ 31ರವರೆಗೆ ಎನ್ಎಸ್ಇಯ ಕಾರ್ಯ ನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಆ ಬಳಿಕ 2013ರಿಂದ 2017ರವರೆಗೆ ಅವರನ್ನು ಕಾರ್ಯಕಾರಿಯೇತರ ಉಪ ಮುಖ್ಯಸ್ಥರಾಗಿ ನೇಮಕವಾಗಿದ್ದರು.

ಇದಕ್ಕೂ, ಮುಂಚೆ ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಇ.ಡಿ ಅಧಿಕಾರಿಗಳು ಎನ್ಎಸ್ಇಯ ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಸಿಇಒ ಚೈತ್ರ ರಾಮಕೃಷ್ಣನ್ ಅವರನ್ನು ಬಂಧಿಸಿತ್ತು. ಅಲ್ಲದೆ, ಮುಂಬೈ ಮಾಜಿ ಪೊಲೀಸ್ ಆಯುಕ್ತ ಸಂಜಯ್ ಪಾಂಡೆ ಅವರನ್ನು ಸಹ ಅಕ್ರಮ ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಇ.ಡಿ ಬಂಧಿಸಿತ್ತು. ಇದನ್ನೂ ಓದಿ : ಒಂದೇ ದಿನ ಅಂಬಾನಿಗೆ 1 ಲಕ್ಷದ 19 ಸಾವಿರ ಕೋಟಿ ರೂ. ನಷ್ಟ..!

LEAVE A REPLY

Please enter your comment!
Please enter your name here