ಗೆಳತಿಯ ಜೊತೆ ಇದ್ದಾಗ ಪತ್ನಿಗೆ ಸಿಕ್ಕಿಬಿದ್ದ ಬಿಜೆಪಿ ನಾಯಕ : ಉಚ್ಚಾಟನೆ

Mohit Sonkar

ಗೆಳತಿಯ ಜತೆ ಹೊರಗಡೆ ಸುತ್ತಾಡುವಾಗ ಸಿಕ್ಕಿಬಿದ್ದಿದ್ದ ಉತ್ತರ ಪ್ರದೇಶದ ಬಿಜೆಪಿ ನಾಯಕ ಮೋಹಿತ್ ಸೋಂಕರ್​​ ( Mohit Sonkar ) ನನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.

ಬುಂದೇಲ್‌ಖಂಡ್ ಪ್ರಾಂತ್ಯದ ಬಿಜೆಪಿ ಪಕ್ಷದ ಕಾರ್ಯದರ್ಶಿ ಮೋಹಿತ್ ಸೋಂಕರ್( Mohit Sonkar ) ಅವರು, ಗೆಳತಿಯ ಜತೆ ಹೊರಗಡೆ ಸುತ್ತಾಡಲು ಹೋಗಿದ್ದರು.

ಇದನ್ನೂ ಓದಿ : ಪ್ರವಾದಿ ಮಹಮ್ಮದರ ಅವಹೇಳನ – ಬಿಜೆಪಿ ಶಾಸಕ ಟೈಗರ್​ ರಾಜಾಸಿಂಗ್​ ಬಂಧನ

ಆ ಸಂದರ್ಭದಲ್ಲಿ ಅವರನ್ನು ಪತ್ತೆಹಚ್ಚಿದ್ದ ಪತ್ನಿ ಮತ್ತು ಅತ್ತೆ, ಸಾರ್ವಜನಿಕವಾಗಿ ಥಳಿಸಿದ್ದರು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಉತ್ತರ ಪ್ರದೇಶ ಬಿಜೆಪಿ ಘಟಕ ಮೋಹಿತ್ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದೆ.

ಮೋಹಿತ್ ಮತ್ತು ಅವರ ಗೆಳತಿ ವಿರುದ್ಧ ಮೋಹಿತ್ ಪತ್ನಿ ನೀಡಿರುವ ದೂರಿನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಕ್ಷದಿಂದ ಉಚ್ಚಾಟನೆ ಮಾಡಿರುವ ಕುರಿತು ಮೋಹಿತ್ ಅವರಿಗೆ ಬಿಜೆಪಿ ಪತ್ರ ರವಾನಿಸಿದೆ.

LEAVE A REPLY

Please enter your comment!
Please enter your name here