ಬೆಳಗಾವಿ ಮೂಲದ ಬಿಜೆಪಿ ಕಾರ್ಯಕರ್ತ ಮತ್ತು ಗುತ್ತಿಗೆದಾರರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಮೊದಲ ಆರೋಪಿ ಆಗಿರುವ ಮಾಜಿ ಸಚಿವ ಕೆ ಎಸ್ ಈಶ್ವರಪ್ಪಗೆ ಉಡುಪಿ ಪೊಲೀಸರು ತಮ್ಮ ತನಿಖಾ ವರದಿಯಲ್ಲಿ ಆರೋಪ ಮುಕ್ತಗೊಳಿಸಿರುವುದನ್ನು ಸ್ವಾಗತಿಸಿ ಆಳ್ವಾಸ್ ಗ್ರೂಪ್ಗಳ ಮಾಲೀಕ ಮೋಹನ್ ಆಳ್ವ ಅವರು ಕನ್ನಡದ ಎಲ್ಲ ಪ್ರಮುಖ ದಿನ ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದಾರೆ.
ಸತ್ಯಕ್ಕೆ ಸಂದ ಜಯ ಎನ್ನುವ ಶೀರ್ಷಿಕೆಯಲ್ಲಿ ಜಾಹೀರಾತು ನೀಡಿದ್ದಾರೆ.
ಆಳ್ವಾಸ್ ಗ್ರೂಪ್ಗಳ ಮಾಲೀಕ ಮೋಹನ್ ಆಳ್ವ ಅವರ ಜೊತೆಗೆ ಬಂಟ್ವಾಳ ಬಿಜೆಪಿ ಶಾಸಕ ರಾಜೇಶ್ ನಾಯಕ, ಮಾಜಿ ಸಂಸದ ಕೆ ವಿರೂಪಾಕ್ಷಪ್ಪ, ಓಂ ಶಕ್ತಿಯ ಉದಯ ಮತ್ತು ಸುವರ್ಣ ಗ್ರೂಪ್ ಮಾಲೀಕ ಉದಯ ಅವರು ಜಾಹೀರಾತು ನೀಡಿದ್ದಾರೆ.
ನ್ಯಾಯದೇವತೆಯ ಮುಂದೆ ನಿರಾಧಾರ ಆರೋಪಗಳು ಎದುರಾದರೂ ಸತ್ಯ ಬಹಿರಂಗವಾಗಿದೆ ಎಂದು ಮೋಹನ್ ಆಳ್ವ ಅವರು ಜಾಹೀರಾತು ನೀಡಿದ್ದಾರೆ.
ಪೊಲೀಸರು ತಮ್ಮ ತನಿಖಾವರದಿಯನ್ನು ಬೆಂಗಳೂರಿನ ಜನಪ್ರತಿನಿಧಿನಗಳ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಈ ವರದಿ ಬಗ್ಗೆ ನ್ಯಾಯಾಲಯದಲ್ಲಿ ಇನ್ನಷ್ಟೇ ವಿಚಾರಣೆ ಆರಂಭ ಆಗ್ಬೇಕಿದೆ.
ತನಿಖಾ ವರದಿ ಸಲ್ಲಿಸಿರುವ ಪೊಲೀಸರು ಈ ಪ್ರಕರಣದಲ್ಲಿ ಮೊದಲ ಆರೋಪಿ ಆಗಿರುವ ಮಾಜಿ ಸಚಿವ ಈಶ್ವರಪ್ಪ ಅವರನ್ನು ವಿಚಾರಣೆಗೆ ಒಳಪಡಿಸಿಲ್ಲ.
ಈಶ್ವರಪ್ಪಗೆ ಪೊಲೀಸರು ನೀಡಿರುವ ಆರೋಪಮುಕ್ತತೆಯ ವಿರುದ್ಧ ಗುತ್ತಿಗೆದಾರ ಪತ್ನಿ ಜಯಶ್ರೀ ಕಿಡಿಕಾರಿದ್ದಾರೆ.
ADVERTISEMENT
ADVERTISEMENT