ISRO: ಪ್ರಧಾನಿ ಮೋದಿ ಬೆಂಗಳೂರು ಭೇಟಿ – ಬೆಂಗಳೂರಿನ 13 ರಸ್ತೆಗಳಲ್ಲಿ ಸಂಚಾರ ನಿರ್ಬಂಧ

ಆಗಸ್ಟ್​ 26ರಂದು ಬೆಂಗಳೂರಿಗೆ ಬರಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಸ್ರೋ ಮುಖ್ಯಕಚೇರಿಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ರಾಜಧಾನಿಯ ಪ್ರಮುಖ ರಸ್ತೆಗಳನ್ನು ಬಳಸದಂತೆ ಸಂಚಾರಿ ಪೊಲೀಸರು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.

ಬೆಳಗ್ಗೆ 7 ಗಂಟೆಗೆ  ಇಸ್ರೋ ಕಚೇರಿಗೆ ಭೇಟಿ ನೀಡಿ ಚಂದ್ರಯಾನ ಯಶಸ್ವಿಗಾಗಿ ವಿಜ್ಞಾನಿಗಳನ್ನು ಅಭಿನಂದಿಸಲಿರುವ ಪ್ರಧಾನಿ ಮೋದಿ  ರೋಡ್​ ಶೋವನ್ನೂ ನಡೆಸಲಿದ್ದಾರೆ.

ನಸುಕಿನ ಜಾವ 4 ಗಂಟೆಯಿಂದ ಬೆಳಗ್ಗೆ 9.30ರವರೆಗೆ ಈ ಕೆಳಗಿನ ರಸ್ತೆಗಳನ್ನು ಬಳಸದಂತೆ ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ. 

1. ಹಳೆ ಏರ್​ಪೋರ್ಟ್​ ರಸ್ತೆ

2. ಹಳೆ ಮದ್ರಾಸ್​ ರಸ್ತೆ

3. ಎಂ ಜಿ ರಸ್ತೆ

4. ಕಬ್ಬನ್​ ರಸ್ತೆ

5. ರಾಜಭವನ ರಸ್ತೆ

6. ಬಳ್ಳಾರಿ ರಸ್ತೆ (ಮೇಖ್ರಿ ಸರ್ಕಲ್​)

7. ಸಿ ವಿ ರಾಮನ್​ ರಸ್ತೆ

8. ಯಶವಂತಪುರ ಫ್ಲೈ ಓವರ್​

9. ತುಮಕೂರು ರಸ್ತೆ (ಯಶವಂತಪುರದಿಂದ ನಾಗಸಂದ್ರ)

10. ಮಾಗಡಿ ರಸ್ತೆ

11. ಹೊರವರ್ತುಲ ರಸ್ತೆ (ಗೊರಗುಂಟೆಪಾಳ್ಯದಿಂದ ಸುಮ್ಮನಹಳ್ಳಿ)

12. ಗುಬ್ಬಿ ತೋಟದಪ್ಪ ರಸ್ತೆ

13. ಜಾಲಹಳ್ಳಿ ಕ್ರಾಸ್​ ರಸ್ತೆ

LEAVE A REPLY

Please enter your comment!
Please enter your name here