ಪ್ರಧಾನಿ ರಕ್ಷಣೆಯಲ್ಲಿ ಬ್ರಿಜ್​ಭೂಷಣ್; ರಾಹುಲ್ ಗಾಂಧಿ ಆರೋಪ

credit: Congress twitter
credit: Congress twitter

ದೇಶದಲ್ಲಿ ಕುಸ್ತಿಪಟುಗಳ ಇಂದಿನ ಸ್ಥಿತಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ನೇರ ಕಾರಣ ಎಂದು ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ.

ದೇಶಕ್ಕೆ 25 ಅಂತಾರಾಷ್ಟ್ರೀಯ ಪದಕಗಳನ್ನು ತಂದ ಹೆಣ್ಣುಮಕ್ಕಳು ನ್ಯಾಯಕ್ಕಾಗಿ ಬೀದಿಯಲ್ಲಿ ಹೋರಾಟ ಮಾಡುತ್ತಿದ್ದಾರೆ.

ಆದರೆ, ಇದೇ ಸಂದರ್ಭದಲ್ಲಿ ಲೈಂಗಿಕ ಕಿರುಕುಳದ ಆರೋಪ ಹೊತ್ತ ಬಿಜೆಪಿ ಸಂಸದ ಬ್ರಿಜ್​ಭೂಷಣ್​ಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ರಕ್ಷಣಾಕವಚವಾಗಿದೆ. ಮೋದಿಯವರ ರಕ್ಷಣಾ ಕವಚದಲ್ಲಿ ಬ್ರಿಜ್​ಭೂಷಣ್ ಶರಣ್ ಸಿಂಗ್ ಸುರಕ್ಷಿತವಾಗಿದ್ದಾರೆ.

ಇದು ಮೋದಿ ಭಾರತ ಎಂದು ಎಐಸಿಸಿ ಪ್ರಮುಖ ನಾಯಕ ರಾಹುಲ್​ ಗಾಂಧಿ ಹೇಳಿಕೆ ನೀಡಿದ್ದಾರೆ.