ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ದಿವಂಗತ ತಾಯಿ ಹೀರಾಬೆನ್ ವಿರುದ್ಧ ಫೇಸ್‌ಬುಕ್ ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಪ್ರಕಟಿಸಿದ್ದ ಆರೋಪಿಗೆ ಗುಜರಾತ್ ಹೈಕೋರ್ಟ್ ಬೇಲ್ ನಿರಾಕರಿಸಿದೆ
ಪ್ರಧಾನಿ ಮೋದಿ ಅವರನ್ನು ಇಷ್ಟಪಡಲು ಅಥವಾ ಇಷ್ಟಪಡದೇ ಇರಲು ವ್ಯಕ್ತಿಗಳು ಸ್ವತಂತ್ರರು. ಆದರೆ ಇದರರ್ಥ ದೇಶದ ಪ್ರಧಾನಿ ಮತ್ತವರ ತಾಯಿಯ ಬಗ್ಗೆ ಅವಹೇಳನಕಾರಿ ಮತ್ತು ನಿಂದನೀಯ ಭಾಷೆ ಬಳಸಬಹುದು ಎಂದಲ್ಲ. ಆದ್ದರಿಂದ ಹೇಳಿಕೆಯನ್ನು ಮತ್ತೆ ಉಲ್ಲೇಖಿಸದೆಯೇ ನ್ಯಾಯಾಲಯ ಸಾಮಾನ್ಯ ಅವಲೋಕನವನ್ನಷ್ಟೇ ಮಾಡುತ್ತಿದೆ.
ಎಂದು ನ್ಯಾ. ನಿರ್ಝರ್ ದೇಸಾಯಿ ಅವರಿದ್ದ ಏಕಸದಸ್ಯ ಪೀಠ ತಿಳಿಸಿತು.
ಆರೋಪಿ ಅಫ್ಸಲ್‌ಭಾಯ್ ಕಸಂಭಾಯ್ ಲಖಾನಿ ಅವರು ಪ್ರಕಟಿಸಿರುವ ವಸ್ತುವಿಷಯ ಪ್ರಧಾನಿ ವಿರುದ್ಧ ಮಾತ್ರವಲ್ಲದೆ ಅವರ ದಿವಂಗತ ತಾಯಿಯ ವಿರುದ್ಧವೂ ಅವಹೇಳನಕಾರಿ ಮತ್ತು ಅವಮಾನಕರ ಹೇಳಿಕೆಗಳನ್ನು ಒಳಗೊಂಡಿದೆ.
ಅಫ್ಸಲ್‌ಭಾಯ್ ಕಸಂಭಾಯ್ ಲಖಾನಿಯ ಗುಜರಾತ್ ತ್ರಸ್ತ್ ಭಾಜಪಾ ಮಸ್ತ್ ಫೇಸ್‌ಬುಕ್ ಪುಟದಲ್ಲಿ ಪೊರ್ನೋಗ್ರಫಿ ಮತ್ತು ಅಶ್ಲೀಲ ವಿಷಯಗಳು ಇರುವುದನ್ನು, ಪಾಕಿಸ್ತಾನದ ಪರ ಹಾಗೂ ಭಾರತ ವಿರೋಧಿ ಪೋಸ್ಟ್‌ಗಳು ಇರುವುದನ್ನು ನ್ಯಾಯಾಲಯ ಗಮನಿಸಿದೆ.
ಇಂತಹ ವ್ಯಕ್ತಿಗೆ ಜಾಮೀನು ನೀಡಿ ಸಮಾಜದಲ್ಲಿ ಮುಕ್ತವಾಗಿ ತಿರುಗಾಡಲು ಅವಕಾಶ ನೀಡಿದರೆ, ಅವರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಪೋಸ್ಟ್‌ಗಳ ಮೂಲಕ ಹಾನಿ ಮಾಡಬಹುದು ಎಂದು ಅಭಿಪ್ರಾಯಪಟ್ಟ ಕೋರ್ಟ್ ಜಾಮೀನು ಮನವಿಯನ್ನು ತಿರಸ್ಕರಿಸಿತು.