ವಾಟ್ಸಪ್ ಪದವೀಧರರು ದಯವಿಟ್ಟು ಈ ಪೋಸ್ಟ್ ಓದಬೇಡಿ..! ಇದು ನಿಮಗಲ್ಲ..!

ಲೈಂಗಿಕ ಕಿರುಕುಳ ನೀಡಿದ ಬಿಜೆಪಿ ಸಂಸದನ ಬಂಧನಕ್ಕೆ ಆಗ್ರಹಿಸಿ ಹೋರಾಟ ತೀವ್ರಗೊಳಿಸಿದ್ದಾರೆ. 
ಮಹಿಳಾ ಕುಸ್ತಿಪಟುಗಳನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನಡೆಸಿಕೊಳ್ಳುತ್ತಿರುವ ವರ್ತನೆ ಬಗ್ಗೆ ರಾಷ್ಟ್ರಪ್ರಶಸ್ತಿ ವಿಜೇತ ಮಂಸೋರೇ ಅವರು ಬರೆದಿದ್ದಾರೆ.
ಸೂಚನೆ : ವಾಟ್ಸಪ್ ಪದವೀಧರರು ದಯವಿಟ್ಟು ಈ ಪೋಸ್ಟ್ ಓದಬೇಡಿ. ಓದಿ ಇಲ್ಲಿ ಪ್ರತಿಕ್ರಿಯೆ ಬರೆಯಬೇಡಿ. ಇದು ಮನುಷ್ಯತ್ವಕ್ಕೆ ಪ್ರಜಾಪ್ರಭುತ್ವಕ್ಕೆ ಸ್ಪಂದಿಸುವವರೊಂದಿಗೆ ಮಾತ್ರ ಹಂಚಿಕೊಂಡಿರುವುದು.
ಕುಸ್ತಿಪಟುಗಳು ಇಂದು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ ಪತ್ರವನ್ನು ಓದಿ ಕಣ್ತುಂಬಿಕೊಳ್ತು.
ಬಹುಶಃ ಜಗತ್ತಿನಲ್ಲಿ ಭಾರತದಲ್ಲಿ ಮಾತ್ರ ನ್ಯಾಯ ಕೇಳುವವರೇ ಅಪರಾಧಿಗಳಾಗುತ್ತಾರೆ ಎಂದು ಅನಿಸುತ್ತಿದೆ. ರಕ್ಷಣೆ ನೀಡಿ, ಅವರ ನೋವಿಗೆ ಸ್ಪಂದಿಸಬೇಕಾದ ಸರ್ಕಾರ ಆರೋಪಿಯನ್ನು ಸ್ವತಃ ರಕ್ಷಿಸುವ ಪಣತೊಟ್ಟಿರುವಾಗ ಯಾರೇನು ಮಾಡಲು ಸಾಧ್ಯ ಎಂಬ ಹತಾಷ ಭಾವ ಮೂಡುತ್ತಿದೆ.
ಪೋಕ್ಸೋ ಆಪಾದಿತನನ್ನು ಪ್ರಜಾಪ್ರಭುತ್ವವನ್ನು ಕಾಪಾಡಬೇಕಾದ ಅತ್ಯುನ್ನತ ಸ್ಥಳವಾದ ಲೋಕಸಭೆಗೆ ಗೌರವ ಕೊಟ್ಟು ಆಹ್ವಾನಿಸುವವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಸ್ವತಃ ಮಹಿಳೆಯಾಗಿ, ಪ್ರತಿಭಟನೆ ನಡೆಯುತ್ತಿರುವ ಸ್ಥಳದಿಂದ ಕೇವಲ ಎರಡೇ ಕಿ.ಮೀ ದೂರದಲ್ಲಿ ಮೌನವಾಗಿ ಕೂತಿರುವ ರಾಷ್ಟ್ರಪತಿಗಳಿರುವಂತಹ ಈ ದೇಶದಲ್ಲಿ ನ್ಯಾಯ ಮರೀಚಿಕೆಯಾಗುತ್ತಿದೆ.
ನೊಂದವರ ಪರವಾಗಿ ಇರಬೇಕಾದ ದೇಶದ ಜನತೆಯಲ್ಲಿ ಬಹುಪಾಲು ಜನರು ಪಕ್ಷ ನಾಯಕನೆಂಬ ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಆ ನೊಂದ ಮಹಿಳೆಯರನ್ನೇ ದೂಷಿಸುತ್ತಿರುವಾಗ ಹತಾಷೆ, ನೋವು ಸಂಕಟವನ್ನು ಅನುಭವಿಸದೇ ಬೇರೇನು ಮಾಡಲು ಸಾಧ್ಯ?