ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮಹತ್ವಾಕಾಂಕ್ಷೆ ವಂದೇ ಭಾರತ್ ರೈಲುಗಳಿಗೆ ಚೀನಾದಿಂದ ಸರ್ಕಾರ ಗಾಲಿ (ಚಕ್ರ)ವನ್ನು ಖರೀದಿಸುತ್ತಿದೆ.
170 ಕೋಟಿ ರೂಪಾಯಿ ಮೊತ್ತದ 39 ಸಾವಿರ ರೈಲು ಗಾಲಿಗಳ ಖರೀದಿಗೆ ಟಿಝಡ್ ಹಾಂಕಾAಗ್ ಇಂಟರ್ ನ್ಯಾಷನಲ್ ಲಿಮಿಟೆಡ್‌ಗೆ ಗುತ್ತಿಗೆ ನೀಡಲಾಗಿದೆ ಎಂದು ಪ್ರಮುಖ ಆಂಗ್ಲ ದೈನಿಕ ಎಕಾಮಿಕ್ ಟೈಮ್ಸ್ ವರದಿ ಮಾಡಿದೆ.
ರಷ್ಯಾ-ಉಕ್ರೇನ್ ಯುದ್ಧದ ಕಾರಣದಿಂದ ರೈಲು ಗಾಲಿ ಪೂರೈಕೆದಾರರ ಅಲಭ್ಯತೆ ಹಿನ್ನೆಲೆಯಲ್ಲಿ ಚೀನಾ ಕಂಪನಿಗೆ ಗುತ್ತಿಗೆ ನೀಡಲಾಗಿದೆ.
ಏಪ್ರಿಲ್ ರಂದು ಗಾಲಿಗಳಿಗಾಗಿ ರೈಲ್ವೆ ಸಚಿವಾಲಯ ಟೆಂಡರ್ ಆಹ್ವಾನಿಸಿತ್ತು. ಮೇ 2ರಂದು ಚೀನಾದ ಕಂಪನಿಗೆ ಸಚಿವಾಲಯ ಟೆಂಡರ್ ನೀಡಿದೆ.
ಗಲ್ವಾನ್ ನಲ್ಲಿ ಭಾರತ-ಚೀನಿ ಸೈನಿಕರ ನಡುವಿನ ಘರ್ಷಣೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಚೀನಾ ಕಂಪನಿಗಳ ಜೊತೆಗೆ ಸರ್ಕಾರದ ಮಟ್ಟದಲ್ಲಿ ನಡೆಯುವ ವ್ಯವಹಾರದ ಮೇಲೆ ನಿರ್ಬಂಧ ವಿಧಿಸಿತ್ತು.