ಮೋದಿ ಸರ್ಕಾರದಲ್ಲಿ ಸಾಧನೆ ಇಲ್ಲ – ಎಲ್ಲವೂ ಫೇಲ್: ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಟೀಕೆ

ರಾಜ್ಯಸಭೆಯ ಬಿಜೆಪಿ ಸಂಸದರಾಗಿರುವ ಸುಬ್ರಮಣಿಯನ್ ಸ್ವಾಮಿಯವರು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಲ್ಲಿಯವರೆಗಿನ ಆಡಳಿತದಲ್ಲಿ ಫೇಲ್ ಆಗಿದೆ ಎಂದು ಟೀಕಿಸಿದ್ದಾರೆ.

ಮೋದಿ ಸರ್ಕಾರದ ವೈಫಲ್ಯಗಳನ್ನು ಪಟ್ಟಿ ಮಾಡಿ ಮಾಡಿದ್ದಾರೆ.

# ಆರ್ಥಿಕತೆಯಲ್ಲಿ- ಫೇಲ್ ಗಡಿ ಭದ್ರತೆ – ಫೇಲ್

# ವಿದೇಶಾಂಗ ನೀತಿ – ಅಫ್ಘಾನಿಸ್ತಾನ

# ವೈಫಲ್ಯ ರಾಷ್ಟ್ರೀಯ ಭದ್ರತೆ – ಫೆಗಾಸಸ್

# ಎನ್ಎಸ್ಓ ಆಂತರಿಕ ಭದ್ರತೆ – ಕಾಶ್ಮೀರದಲ್ಲಿನ ಕತ್ತಲು

ಇದಕ್ಕೆಲ್ಲ ಯಾರು ಜವಾಬ್ದಾರರು..?- ಎಂದು ಸುಬ್ರಮಣಿಯನ್ ಸ್ವಾಮಿ ಬರೆದುಕೊಂಡಿದ್ದಾರೆ.

ದೇಶದ ಆರ್ಥಿಕತೆ, ಭದ್ರತೆಯಲ್ಲಿ ಫೇಲ್ ಆಗಿರುವ ಮೋದಿ ಸರ್ಕಾರದ ಈ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಬಿಜೆಪಿ ಸಂಸದರೇ ಆಗಿರುವ ಸ್ವಾಮಿಯವರು ಕುಟುಕಿದ್ದಾರೆ.

ಸ್ವತಃ ಆರ್ಥಿಕ ತಜ್ಞರಾಗಿರುವ ಸುಬ್ರಮಣಿಯನ್ ಸ್ವಾಮಿಯವರು ಮೋದಿ ಸರ್ಕಾರದ ಆಡಳಿತದ ಬಗ್ಗೆ ಹಾಗೂ ದೇಶದ ಆರ್ಥಿಕತೆಯಲ್ಲಿ ಸರ್ಕಾರದ ತೀರ್ಮಾನದ ಬಗ್ಗೆ ಆಗಾಗ ತಮ್ಮ ವಿರೋಧವನ್ನು ವ್ಯಕ್ತಪಡಿಸುತ್ತಲೇ ಬಂದಿದ್ದಾರೆ.

LEAVE A REPLY

Please enter your comment!
Please enter your name here