ಹಿಂದೂ ದೇವರ ಅಪಹಾಸ್ಯ : ಥ್ಯಾಂಕ್ ಗಾಡ್ ಚಿತ್ರ ನಿಷೇಧಕ್ಕೆ ಹಿಂದೂ ಸಂಘಟನೆಗಳ ಒತ್ತಾಯ

Ajay Devgan

ಬಾಲಿವುಡ್ ನಟ ಅಜಯ ದೇವಗನ್ (Ajay devgan)ನಟನೆಯ ‘ಥ್ಯಾಂಕ್ ಗಾಡ್’ ಸಿನಿಮಾವನ್ನು ನಿಷೇಧಿಸಬೇಕೆಂದು ಹಿಂದೂ ಜನಜಾಗೃತಿ ಸಮಿತಿ ಒತ್ತಾಯಿಸಿದೆ. ಈ ಸಿನಿಮಾದಲ್ಲಿ ಹಿಂದೂ ದೇವರನ್ನು ಅಪಹಾಸ್ಯ ಮಾಡಲಾಗಿದ್ದು, ಇಂತಹ ಚಿತ್ರಗಳನ್ನು ಸೆನ್ಸಾರ್ ಮಂಡಳಿಯವರು ಬಿಡುಗಡೆ ಮಾಡಲು ಹೇಗೆ ಅನುಮತಿ ನೀಡುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ.

ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂ ಧರ್ಮದ ಚಿತ್ರಗುಪ್ತ ಮತ್ತು ಯಮ ದೇವರ ಅಪಹಾಸ್ಯವನ್ನು ನಾವು ಎಂದಿಗೂ ಸಹಿಸುವುದಿಲ್ಲ. ಈ ದೇವರ ಅಪಹಾಸ್ಯ ಮಾಡುವುದನ್ನು ಸಹಿಸುವುದಿಲ್ಲ ಎಂದು ಹಿಂದೂ ಜನ ಜಾಗೃತಿಯ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಥ್ಯಾಂಕ್ ಗಾಡ್ ಸಿನಿಮಾದಲ್ಲಿ ಚಿತ್ರಗುಪ್ತ ದೇವರನ್ನು ಪೂಜಿಸುವ ಕಾಯಸ್ಥ ಸಮುದಾಯದ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಹಿಮಾಂಶು (Himanshu Srivastav) ಆರೋಪ ಮಾಡಿದ್ದು, ಚಿತ್ರದ ನಟ ಅಜಯ್ ದೇವಗನ್, ಸಿದ್ಧಾರ್ಥ ಮಲ್ಹೋತ್ರಾ ಹಾಗೂ ಇಂದ್ರ ಕುಮಾರ್ ಮೇಲೆ ದೂರು ನೀಡಿದ್ದರು.

ಅಜಯ್ ದೇವಗನ್ (Ajay devgan) ಮುಖ್ಯ ಭೂಮಿಕೆಯ ಥ್ಯಾಂಕ್ ಗಾಡ್ ಸಿನಿಮಾ ತನ್ನದೇ ಆದ ಕಾರಣಗಳಿಂದಾಗಿ ಕುತೂಹಲ ಮೂಡಿಸಿದೆ. ಈಗಾಗಲೇ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಸಖತ್ ಮನರಂಜನೆ ಜೊತೆಗೆ ಒಂದೊಳ್ಳೆ ಸಂದೇಶವನ್ನು ನೀಡುವಂತಹ ಸಿನಿಮಾ ಇದಾಗಿದೆ. ಅಜಯ್ ದೇವಗನ್ ಕೂಡ ತುಂಬಾ ಚೆನ್ನಾಗಿ ನಟಿಸಿದ್ದಾರೆ. ಅಕ್ಟೋಬರ್ 25ಕ್ಕೆ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಅದಕ್ಕೂ ಮುನ್ನ ಟ್ರೈಲರ್ ಸದ್ದು ಮಾಡುತ್ತಿದೆ. ಇದನ್ನೂ ಓದಿ : ಬಾಲಿವುಡ್ ಟ್ರೋಲಿಗರಿಗೆ ‘ಬ್ರಹ್ಮಾಸ್ತ್ರ’ವಾದ ಆಲಿಯಾ ಮಾತು – ಮತ್ತೊಂದು ‘ಫ್ಲಾಪ್ ಬಸ್ಟರ್’ ಖಚಿತನಾ?

LEAVE A REPLY

Please enter your comment!
Please enter your name here