Bengaluru: ಮೊಬೈಲ್​ ಎಗರಿಸ್ತಿದ್ದ ಕಳ್ಳನನ್ನು ಹಿಡಿದ ಪೊಲೀಸರು..!

ಮೊಬೈಲ್​ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ರೆಡ್​ಹ್ಯಾಂಡಾಗಿ ಹಿಡಿದ  ಸಂಚಾರಿ ಪೊಲೀಸರು ಆತನಿಂದ ಮೊಬೈಲ್​ ವಶಕ್ಕೆ ಪಡೆದು ಮಹಿಳೆಯರಿಗೆ ಹಸ್ತಾಂತರಿಸಿದ್ದಾರೆ.

ಬೆಂಗಳೂರಿನ ಬನಶಂಕರಿ ಬಸ್​ ನಿಲ್ದಾಣದಲ್ಲಿ ಮೊಬೈಲ್​ ಎಗರಿಸ್ತಿದ್ದ ಅಸಾಮಿಯನ್ನು ವಶಕ್ಕೆ ಪಡೆದಿದ್ದಾರೆ.

ಬನಶಂಕರಿ ಬಸ್ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಎಸ್​ಐ ಬೆಟ್ಟಸ್ವಾಮಿ ಮತ್ತು ಪೊಲೀಸ್​ ಕಾನ್ಸ್​ಸ್ಟೇಬಲ್​ ಕಾಶಿರಾಮ್ ರವರು ಮೊಬೈಲ್ ಕಳ್ಳತನ ಮಾಡುತ್ತಿದ್ದ ಆಸಾಮಿಯನ್ನು ಹಿಡಿದು ಬನಶಂಕರಿ ಪೊಲೀಸರ ವಶಕ್ಕೆ ನೀಡಿದ್ದು ಇಬ್ಬರು ಮಹಿಳೆಯರು ಕಳೆದುಕೊಂಡಿದ್ದ ಮೊಬೈಲನ್ನು ವಾಪಸ್ ಕೊಡಿಸಿರುತ್ತಾರೆ

ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here