ಜೆಡಿಎಸ್ ಪಕ್ಷದಲ್ಲಿ ವಿಧಾನ ಪರಿಚತ್ ಸದಸ್ಯ ಆಗಬೇಕು ಅಂದ್ರೆ ಒಬ್ಬೊಬ್ಬ ಶಾಸಕರಿಗೂ 50 ಲಕ್ಷ ರೂ ಕೊಡಬೇಕು ಎಂದು ಜೆಡಿಎಸ್ ಶಾಸಕ ಕೋಲಾರದ ಶ್ರೀನಿವಾಸ್ ಗೌಡ ಅವರು ತಮ್ಮದೇ ಪಕ್ಷದೆ ವಿರುದ್ಧ ಗಂಭೀರ ಆರೋಪಮಾಡಿದ್ದಾರೆ.
ಇಂದು ಕೋಲಾರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜೆಡಿಎಸ್ ಪಕ್ಷದ ಶಾಸಕಾಂಗ ನಾಯಕ ಎಚ್.ಡಿ.ಕುಮಾರಸ್ವಾಮಿಯವರ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಅಪರೇಷನ್ ಕಮಲದ ಸಮಯದಲ್ಲಿ ನನಗೆ ಆಗಿನ ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಹೆಷ್.ವಿಶ್ವನಾಥ್ ಹಾಗೂ ಸಿಪಿ ಯೋಗಿಶ್ವರ್ 5 ಕೋ.ರೂ ನೀಡಿದ್ದರು. ಅಲ್ಲದೇ, ಇನ್ನೂ 25 ಕೋ.ರೂ ನೀಡುವ ಬಗ್ಗೆ ಆಮಿಷ ತೋರಿದ್ದರು. ಆದರೆ, ನಾನು ಬಲಿಯಾಗಿರಲಿಲ್ಲ. ಆ 5 ಕೋ.ರೂಗಳನ್ನು ವಾಪಾಸ್ ಕೊಟ್ಟಿದ್ದೆ.
ಆದರೆ, ನಮ್ಮದೇ ಪಕ್ಷದಲ್ಲಿ ವಿಧಾನ್ ಪರಿಷತ್ ಸದಸ್ಯ(MLC) ಆಗಬೇಕು ಅಂದರೆ ಒಬ್ಬೊಬ್ಬ ಶಾಸಕರಿಗೂ 50 ಲಕ್ಷ ರೂ. ನೀಡಬೇಕಾಗಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.
ಇದೀಗ, ಶ್ರೀನಿವಾಸ ಗೌಡರ ಈ ಗಂಭಿರ ಆರೋಪಕ್ಕೆ ಎಚ್ಡಿ ಕುಮಾರಸ್ವಾಮಿ ಯಾವ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವುದನ್ನು ಕಾಯ್ದು ನೋಡಬೇಕಿದೆ.