ದಕ್ಷಿಣ ಪದವೀಧರ ಕ್ಷೇತ್ರದಿಂದ ಪರಿಷತ್‌ಗೆ ನಡೆಯುತ್ತಿರುವ ಮತ ಎಣಿಕೆ ಮುಂದುವರಿದ್ದು ಇನ್ನೂ 49 ಸಾವಿರ ಮತಗಳ ಮತ ಎಣಿಕೆ ಬಾಕಿ ಇದೆ. ಕಾಂಗ್ರೆಸ್ ಅಭ್ಯರ್ಥಿ ಮಧು ಜಿ ಮಾದೇಗೌಡ ಕೇವಲ 2,958 ಮತಗಳ ಮುನ್ನಡೆಯಲ್ಲಿದ್ದಾರೆ.
ಇಲ್ಲಿಯವರೆಗೆ 49,700 ಮತಗಳ ಎಣಿಕೆಯಷ್ಟೇ ಆಗಿದ್ದು, ಇನ್ನೂ 49 ಸಾವಿರ ಮತಗಳ ಎಣಿಕೆ ಬಾಕಿ ಇದೆ.
ಕಾಂಗ್ರೆಸ್‌ನ ಮಧು ಜಿ ಮಾದೇಗೌಡ ಅವರು 16, 137 ಮತಗಳು ಸಿಕ್ಕಿವೆ. ಬಿಜೆಪಿಯ ರವಿಶಂಕರ್ ಅವರಿಗೆ 13,179 ಮತಗಳು ಸಿಕ್ಕಿವೆ. ಜೆಡಿಎಸ್ ಕೇವಲ 8,512 ಮತಗಳನ್ನು ಪಡೆದಿದ್ದಾರೆ.
ಬಿಜೆಪಿಯಲ್ಲಿ ಟಿಕೆಟ್ ಸಿಗದೇ ಪಕ್ಷೇತರರಾಗಿ ಸ್ಪರ್ಧಿಸಿರುವ ಪ್ರಸನ್ನಗೌಡ ಅವರಿಗೆ 3,142 ಮತಗಳು ಸಿಕ್ಕಿವೆ. ಇವರಿಗೆ ರೈತ ಸಂಘ ಮತ್ತು ದಲಿತ ಸಂಘಟನೆಗಳು ಬೆಂಬಲ ಸೂಚಿಸಿದ್ದವು.
ಮಾಜಿ ಸಚಿವ ಈಶ್ವರಪ್ಪ ಆಪ್ತ ವಿನಯ್‌ಗೆ 1,890 ಮತಗಳು ಸಿಕ್ಕಿವೆ. ಬಿಎಸ್‌ಪಿ 1,418 ಮತಗಳನ್ನು ಪಡೆದಿದ್ದಾರೆ. 3,718 ಮತಗಳು ತಿರಸ್ಕೃತಗೊಂಡಿವೆ.