ಕರ್ನಾಟಕದ ಬಿಜೆಪಿ ನಾಯಕರು ದಲಿತ ಸಮುದಾಯಕ್ಕೆ ಸೇರಿದ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರ ತಲೆ ಮೇಲೆ ಹಳೆಯ ಚಡ್ಡಿ ಹೊರಿಸಿ ಮೆರವಣಿಗೆ ಮಾಡಿಸಿರುವುದು ಈಗ ರಾಜಕೀಯ ವಾಗ್ವಾದಕ್ಕೆ ಮೂಲವಾಗಿದೆ.
ಆರ್‌ಎಸ್‌ಎಸ್ ಚಡ್ಡಿಯನ್ನು ಸುಡುವುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀಡಿದ್ದ ಹೇಳಿಕೆಗೆ ಪ್ರತಿಯಾಗಿ ಸಿದ್ದರಾಮಯ್ಯ ಅವರ ಮನೆಗೆ ಹಳೆ ಚಡ್ಡಿಯನ್ನು ತರುವ ಪ್ರತಿತಂತ್ರವನ್ನು ಬಿಜೆಪಿ ಹೆಣೆದಿತ್ತು. ಆದರೆ ಹಳೆ ಚಡ್ಡಿ ಜೊತೆಗೆ ಮೆರವಣಿಗೆಯ ಜವಾಬ್ದಾರಿಯನ್ನು ಬಿಜೆಪಿ ನೀಡಿದ್ದ ಬಿಜೆಪಿ ಎಸ್‌ಸಿ ಮೋರ್ಚಾಕ್ಕೆ.
ಈ ಹಿನ್ನೆಲೆಯಲ್ಲಿ ಬಿಜೆಪಿ ಎಸ್‌ಸಿ ಮೋರ್ಚಾದ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವರು ತಮ್ಮ ತಲೆ ಮೇಲೆ ಹರಿದು ಹೋಗಿರುವ ಹಳೆ ಚಡ್ಡಿಗಳಿರುವ ರಟ್ಟಿನ ಬಾಕ್ಸ್ ಎತ್ತಿಕೊಂಡು ಬೆಂಗಳೂರಿನ ಗಾಂಧಿ ಭವನದಿಂದ ಸಿದ್ದರಾಮಯ್ಯ ಮನೆವರೆಗೂ ಮೆರವಣಿಗೆ ಹೊರಟ್ಟಿದ್ದರು.
ದಲಿತ ಸಮುದಾಯದ ನಾಯಕರೊಬ್ಬರ ತಲೆ ಮೇಲೆ ಬಿಜೆಪಿ ನಾಯಕರು ಹಳೆಯ ಹರಿದುಹೋಗಿರುವ ಚಡ್ಡಿ ಹೊರಿಸಿ ಮೆರವಣಿಗೆ ಮಾಡಿಸಿರುವುದು ಈಗ ವಾಗ್ವಾದಕ್ಕೆ ಕಾರಣವಾಗಿದೆ.
ಈ ಬಗ್ಗೆ ಸರಣಿ ಟ್ವೀಟ್‌ಗಳನ್ನು ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು,
`ನಿಮ್ಮ ಸಂಘದ ಉನ್ನತ ಪದಾಧಿಕಾರಿಗಳಲ್ಲಿ ದಲಿತರು ಮತ್ತು ಹಿಂದುಳಿದ ಜಾತಿಗಳು ಯಾಕೆ ಇಲ್ಲ ಎನ್ನುವ ನನ್ನ ಪ್ರಶ್ನೆಗೆ ಆರ್‌ಎಸ್‌ಎಸ್‌ನವರು ಬಿಜೆಪಿ ಶಾಸಕ ಛಲವಾದಿ ನಾರಾಯಣಸ್ವಾಮಿಯವರ ಮೂಲಕ ಉತ್ತರ ನೀಡಿದ್ದಾರೆ. ಈ ಸಂದೇಶವನ್ನು ಬಿಜೆಪಿಯಲ್ಲಿರುವ ದಲಿತ ಬಂಧುಗಳು ಅರ್ಥಮಾಡಿಕೊಳ್ಳಲಿ ಎಂದು ಹಾರೈಸುತ್ತೇನೆ.
ಛಲವಾದಿ ನಾರಾಯಣಸ್ವಾಮಿಯವರೇ, ಸ್ವಾಭಿಮಾನವನ್ನು ಉಸಿರಾಗಿಸಿಕೊಂಡು ಬದುಕಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸ್ವಲ್ಪ ಓದಿ ಸ್ವಾಭಿಮಾನದ ಪಾಠ ಕಲಿಯಬೇಕೆಂದಷ್ಟೇ ನಿಮಗೆ ನಾನು ನೀಡುವ ಸಲಹೆ’
ಎಂದು ಟ್ವೀಟಿಸಿದ್ದಾರೆ.
ನಿಮ್ಮ ಸಂಘದ ಉನ್ನತ ಪದಾಧಿಕಾರಿಗಳಲ್ಲಿ ದಲಿತರು ಮತ್ತು ಹಿಂದುಳಿದ ಜಾತಿಗಳು ಯಾಕೆ ಇಲ್ಲ? ಎನ್ನುವ ನನ್ನ ಪ್ರಶ್ನೆಗೆ ಆರ್.ಎಸ್.ಎಸ್ ನವರು @BJP4Karnataka ಶಾಸಕ ಛಲವಾದಿ ನಾರಾಯಣ ಸ್ವಾಮಿಯವರ ಮೂಲಕ ಉತ್ತರ ನೀಡಿದ್ದಾರೆ.
ಈ ಸಂದೇಶವನ್ನು ಬಿಜೆಪಿಯಲ್ಲಿರುವ ದಲಿತ ಬಂಧುಗಳು ಅರ್ಥಮಾಡಿಕೊಳ್ಳಲಿ ಎಂದು ಹಾರೈಸುತ್ತೇನೆ. 1/5#AryanRSS pic.twitter.com/3QeFDC3igu— Siddaramaiah (@siddaramaiah) June 7, 2022
ಛಲವಾದಿ ನಾರಾಯಣ ಸ್ವಾಮಿಯವರೇ, ನಿಮ್ಮ ಪ್ರತಿಭಟನೆಯ ಹಕ್ಕನ್ನು ನಾನು ಗೌರವಿಸುತ್ತೇನೆ. ಆದರೆ ಕೇವಲ ರಾಜಕೀಯ ಜಿದ್ದಾಜಿದ್ದಿಗಾಗಿ ಹಳೆಚಡ್ಡಿ ಹೊತ್ತುಕೊಳ್ಳಲೂ ಸಿದ್ಧರಾದ ನಿಮ್ಮ ಗುಲಾಮಿ ಮನಸ್ಥಿತಿಗೆ ನನ್ನ ಧಿಕ್ಕಾರ. 4/5#AryanRSS pic.twitter.com/jyT3VdRuft
— Siddaramaiah (@siddaramaiah) June 7, 2022
ಛಲವಾದಿ ನಾರಾಯಣಸ್ವಾಮಿ ಅವರ ತಲೆ ಮೇಲೆ ಹಳೆಯ ಚಡ್ಡಿಗಳನ್ನು ಹೊರಿಸಿದ ಬಿಜೆಪಿ ನಾಯಕರ ವರ್ತನೆಯನ್ನೂ ಹಲವರು ಈ ಹಿಂದೆ ದಲಿತರ ಮೇಲೆ ಮಲ ಹೊರಿಸಲಾಗುತ್ತಿದ್ದ ನೀಚ ಪದ್ಧತಿಗೆ ಹೋಲಿಸಿ ಆಕ್ರೋಶ ಹೊರಹಾಕಿದ್ದಾರೆ.
ಛಲವಾದಿ ನಾರಾಯಣ ಸ್ವಾಮಿಯವರೇ, ಯಾರ್ಯಾರದೋ ಹಳೆ ಚಡ್ಡಿ ಹೊತ್ತುಕೊಂಡ ನಿಮ್ಮನ್ನು ಕಂಡು ಮನಸ್ಸಿಗೆ ನೋವಾಯಿತು.
ನಿಮ್ಮನ್ನು ಪಠ್ಯಪುಸ್ತಕ ಪರಿಷ್ಕರಣ ಸಮಿತಿಯ ಅಧ್ಯಕ್ಷತೆಯಂತಹ ಸ್ಥಾನದಲ್ಲಿ ಕಾಣುವ ಆಸೆ ನನಗೆ. 3/5#AryanRSS pic.twitter.com/7aSZN1f83B— Siddaramaiah (@siddaramaiah) June 7, 2022
ಆರ್.ಎಸ್.ಎಸ್ ಗೆ ಬೆಂಬಲ ನೀಡಲು ಹಳೆ ಚಡ್ಡಿ ಹೊತ್ತು ಕೊಂಡು ಮೆರವಣಿಗೆ ಮಾಡಿದ ನಾರಾಯಣಸ್ವಾಮಿಯವರೇ,
ನಿಮ್ಮ ಸ್ಥಾನಮಾನ ಏನಿದ್ದರೂ ಇಷ್ಟಕ್ಕೆ ಸೀಮಿತ.
ಆ ಸಂಘದ ಉನ್ನತ ಪದಾಧಿಕಾರಕ್ಕೆ ನೀವು ಸದಾ ಅಸ್ಪೃಶ್ಯ ನೆನಪಿರಲಿ. 2/5#AryanRSS pic.twitter.com/X8kMSbNVKw— Siddaramaiah (@siddaramaiah) June 7, 2022
ಛಲವಾದಿ ನಾರಾಯಣ ಸ್ವಾಮಿಯವರೇ, ಸ್ವಾಭಿಮಾನವನ್ನು ಉಸಿರಾಗಿಸಿಕೊಂಡು ಬದುಕಿದ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಸ್ವಲ್ಪ ಓದಿ ಸ್ವಾಭಿಮಾನದ ಪಾಠ ಕಲಿಯಬೇಕೆಂದಷ್ಟೇ ನಿಮಗೆ ನಾನು ನೀಡುವ ಸಲಹೆ. 5/5#AryanRSS
— Siddaramaiah (@siddaramaiah) June 7, 2022
RSS ಎಂಬುದು ಮನುವಾದವನ್ನು ಪ್ರತಿಪಾದಿಸುವ ಚಡ್ಡಿ ಸಂಘ. ಚಡ್ಡಿ ಸಂಘದ ತತ್ವವನ್ನು ಪಾಲಿಸುತ್ತಿರುವ ಬಿಜೆಪಿ ಇಂದು ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾದವರ ತಲೆ ಮೇಲೆ ಚಡ್ಡಿ ಹೊರಿಸಿದ್ದನ್ನು ನೋಡಿದರೆ; ನನಗೆ ದಲಿತರ ಮೇಲೆ ಇದೆ ಮನುವಾದಿಗಳು ಮಲ ಹೊರಿಸಿದ್ದು ನೆನಪಾಗುತ್ತಿದೆ. pic.twitter.com/QHl82Xygum
— RR 🇮🇳 (@RakshaRamaiah) June 7, 2022