ಪಾಕಿಸ್ತಾನ ವಿರುದ್ಧ ಕಾರ್ಯಾಚರಣೆ: 38 ವರ್ಷಗಳ ಬಳಿಕ ಹುತಾತ್ಮ ಯೋಧನ ದೇಹ ಪತ್ತೆ

Siachen
Siachen
38 ವರ್ಷಗಳ ಹಿಂದೆ ಪಾಕಿಸ್ತಾನದ (Pakistan) ವಿರುದ್ಧದ ಕಾರ್ಯಾಚರಣೆ ವೇಳೆ ಜಗತ್ತಿನ ಅತೀ ಎತ್ತರದ ಯುದ್ಧಭೂಮಿ ಸಿಯಾಚಿನ್​ನಲ್ಲಿ ಸಂಭವಿಸಿದ್ದ ಹಿಮಪಾತದಲ್ಲಿ (Avalanche) ಹುತಾತ್ಮರಾಗಿದ್ದ ಯೋಧನ ಪಾರ್ಥಿವ ಶರೀರ ಈಗ ಲಭ್ಯ ಆಗಿದೆ.
ಸೇನೆಯಿಂದ ಹುತಾತ್ಮ ಯೋಧ ಚಂದ್ರಶೇಖರ್​ ಹರ್ಬೋಲಾಗೆ (Chandrashekhar Harbola) ನೀಡಲಾಗಿರುವ ಸಂಖ್ಯೆ ಉಳ್ಳ ಡಿಸ್ಕ್​​ನ್ನು ಆಧರಿಸಿ ಮೃತದೇಹದ ಗುರುತನ್ನು ಪತ್ತೆ ಹಚ್ಚಲಾಗಿದೆ.
ರಾಣಿಖೇತ್​ನಲ್ಲಿರುವ ಸೈನಿಕ್​ ಗ್ರೂಪ್​ ಸೆಂಟರ್​ನ ಸೈನಿಕರು ಗಸ್ತು ವೇಳೆ ಸಿಯಾಚಿನ್​ನ (Siachen) ಹಿಮ ಆವರಿತ ಬಂಕರ್​ನಲ್ಲಿದ್ದ ಪಾರ್ಥಿವ ಶರೀರವನ್ನು ಪತ್ತೆ ಹಚ್ಚಿದ್ದಾರೆ.
1984ರಲ್ಲಿ ಪಾಕಿಸ್ತಾನ ವಿರುದ್ಧದ ಕಾರ್ಯಾಚರಣೆಗೆ ಆಪರೇಷನ್​ ಮೇಘದೂತದ (Operation Meghdoot) ಭಾಗವಾಗಿ 20 ಸೈನಿಕರ ಪಡೆಯನ್ನು ಸಿಯಾಚಿನ್​ಗೆ ಕಳುಹಿಸಿಕೊಡಲಾಗಿತ್ತು.
ಆದರೆ ದುರಾದೃಷ್ಟವಶಾತ್​ ಮೇ 29, 1984ರಲ್ಲಿ ಹಿಮಪಾತದಲ್ಲಿ 20 ಸೈನಿಕರೂ ಕೊಚ್ಚಿಕೊಂಡು ಹೋಗಿದ್ದರು. ಇವರಲ್ಲಿ 15 ಮಂದಿಯ ಪಾರ್ಥಿವ ಶರೀರವಷ್ಟೇ ಸಿಕ್ಕಿತ್ತು.
Identification disk bearing Army number
Identification disk bearing Army number
ಚಂದ್ರಶೇಖರ್​ ಸೇರಿದಂತೆ ಉಳಿದ ಐವರ ಪಾರ್ಥಿವ ಶರೀರ ಸಿಕ್ಕಿರಲಿಲ್ಲ.

ಇದನ್ನೂ ಓದಿ:

DBoss: ನಟ ದರ್ಶನ್​ ಓದುತ್ತಿರುವ ಆ ಪುಸ್ತಕದ ವಿಶೇಷತೆ ಏನು ಗೊತ್ತಾ..?

ಚಂದ್ರಶೇಖರ್​ ಅವರು ರಾಜಸ್ಥಾನ (Rajasthan) ಮೂಲದವರು. ಇವರ ಪತ್ನಿ ಶಾಂತಿದೇವಿ ಅಲ್ಮೋರಾದಲ್ಲಿ (Almora) ವಾಸಿಸುತ್ತಿದ್ದಾರೆ.
ಈ ದುರಂತ ಸಂಭವಿಸುವ ವೇಳೆ ಶಾಂತಿದೇವಿ ಮತ್ತು ಚಂದ್ರಶೇಖರ್​ ದಂಪತಿ ಮದುವೆ ಆಗಿ 9 ವರ್ಷ ಕಳೆದಿತ್ತು ಮತ್ತು ಇವರ ಹಿರಿ ಮಗಳು ಒಂಭತ್ತು ವರ್ಷ ಮತ್ತು ಕಿರಿ ಮಗಳು ಒಂದೂವರೆ ವರ್ಷದವರಾಗಿದ್ದರು.
ಚಂದ್ರಶೇಖರ್​ ಹರ್ಬೋಲಾ ಅವರ ಪಾರ್ಥಿವ ಶರೀರದ ಜೊತೆಗೆ ಇನ್ನೊಂದು ಪಾರ್ಥಿವ ಶರೀರ ಸಿಕ್ಕಿರುವ ಮಾಹಿತಿ ಇದೆಯಾದರೂ ಗುರುತು ಪತ್ತೆ ಆಗಿಲ್ಲ.

LEAVE A REPLY

Please enter your comment!
Please enter your name here