ಇದು ಸುಳ್ಳು ಸುದ್ದಿ – ಜಮೀರ್​ ಹೇಳಿದ್ದೇನು, ಜಮೀರ್​ ಮಾತಿನ Video ಸಾಕ್ಷ್ಯ

ಹಜ್​ ಭವನದ ನವೀಕರಣಕ್ಕೆ ಸಿಎ ಸಿದ್ದರಾಮಯ್ಯ ಅವರು 5 ಸಾವಿರ ಕೋಟಿ ರೂಪಾಯಿ ನೀಡಿದ್ದಾರೆ ಎಂದು ಸುಳ್ಳು ಸುದ್ದಿ ಪ್ರಸಾರ ಮಾಡಲಾಗಿದೆ.
ಬೆಂಗಳೂರಿನ ಹಜ್​ ಭವನದಲ್ಲಿ ಮಂಗಳವಾರ ನಡೆದಿದ್ದ ಹಜ್​ ಯಾತ್ರಿಕರ ವಿಮಾನಯಾನ ಕಾರ್ಯಕ್ರಮ ಉದ್ಘಾಟನೆಯಲ್ಲಿ ವಸತಿ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಜಮೀರ್​ ಅಹ್ಮದ್​ ಖಾನ್​ ಅವರು ಮಾಡಿದ ಭಾಷಣವನ್ನು ಉಲ್ಲೇಖಿಸಿ ಕನ್ನಡದ ಪ್ರಮುಖ ಸುದ್ದಿವಾಹಿನಿ ಪಬ್ಲಿಕ್​ ಟಿವಿ ಸುಳ್ಳು ಸುದ್ದಿ ಪ್ರಸಾರ ಮಾಡಿತ್ತು.
ನಿಜಕ್ಕೂ ಜಮೀರ್​ ಹೇಳಿದ್ದೇನು..?
ನಿಮ್ಮ ಸರ್ಕಾರದ ಇದ್ದಾಗ ನವೀಕರಣಕ್ಕೆ ಐದು ಕೋಟಿಯನ್ನು ಕೊಟ್ಟಿದ್ರು. ಸಮ್ಮಿಶ್ರ ಸರ್ಕಾರ ಇದ್ದಾಗ ಕುಮಾರಸ್ವಾಮಿ ಬಿಡುಗಡೆ ಮಾಡಿಲ್ಲ. ಬಿಜೆಪಿ ಸರ್ಕಾರ ಬಂತು ಬಿಜೆಪಿ ಸರ್ಕಾರನೂ ಬಿಡುಗಡೆ ಮಾಡಿಲ್ಲ. ಅದು ಹಂಗೇ ಉಳ್ಕೊಂಡಿದೆ, ದಯಮಾಡಿ ತಾವು ಬಿಡುಗಡೆ ಮಾಡ್ಬೇಕು ಎಂದಾಗ ಹಿಂದೂ ಮುಂದೆ ನೋಡದೇ ಐದು ಕೋಟಿಯಲ್ಲ ಇನ್ನೂ ಹೆಚ್ಚಾಗಿದ್ರೆ ಹೇಳು ಎಂದು ಫಂಡ್​ ಬಿಡುಗಡೆ ಮಾಡಲು ಆದೇಶ ಮಾಡಿದ್ರಿ.
ನಾವು ಕೇಳಲಾಗಲ್ಲ, ನೀವಾದ್ರೂ ಕೇಳ್ಬೇಕು ಅಂತ ಹೇಳಿ ಅಂತ ನಮ್ಮ ಧರ್ಮಗುರುಗಳು  ಹೇಳಿದ್ರು. ಪ್ರಣಾಳಿಕೆಯಲ್ಲಿ ಅಲ್ಪಸಂಖ್ಯಾತರಿಗೆ ಐದು ಸಾವಿರ ಕೋಟಿ ರೂಪಾಯಿ ಕೊಡ್ತೀವಿ ಅಂತ ಹೇಳಿದ್ದೀರಿ. ಐದು ಗ್ಯಾರಂಟಿ ಘೋಷಣೆಯಿಂದ ಅನುದಾನ ಕಡಿಮೆ ಆಗಬಹುದು ಅಂತ ವಾಸನೆ ಹೊಡೆದಿದೆ, ಹಾಗಾಗಿ ನಾವು ಕೇಳಕ್ಕಾಗಲ್ಲ, ದಯಮಾಡಿ ನೀವು (ಸಚಿವ ಜಮೀರ್​) ಮುಖ್ಯಮಂತ್ರಿಗಳಲ್ಲಿ ನಮ್ಮ ಕಡೆಯಿಂದ ನೀವು ಕೇಳ್ಕೋಬೇಕು ಅಂತ ಅವರ (ಧರ್ಮಗುರುಗಳ) ಆದೇಶದ ಮೇರೆಗೆ ನಿಮಗೆ ಕೇಳ್ಕೋತ್ತಾ ಇದ್ದೀನಿ ಐದು ಸಾವಿರ ಕೋಟಿಯಲ್ಲಿ ಯಾವುದೇ ಕಾರಣಕ್ಕೂ ಕಡಿಮೆ ಮಾಡಬಾರದು 
ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಸಚಿವ ಜಮೀರ್​ ವೇದಿಕೆಯಲ್ಲೇ ತಮ್ಮ ಧರ್ಮದ ಧಾರ್ಮಿಕ ಮುಖಂಡರ ಪರವಾಗಿ ಮನವಿ ಮಾಡಿದ್ದರು.