BREAKING: ಬಾತ್​ರೂಂನಲ್ಲೇ ಸಚಿವ ಕತ್ತಿ ಅವರಿಗೆ ಹೃದಯಾಘಾತ

Minister Umesh Katti
Minister Umesh Katti
ಆಹಾರ ಸಚಿವ ಉಮೇಶ್​ ಕತ್ತಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮಂಗಳವಾರ ರಾತ್ರಿ ಬೆಂಗಳೂರಿನ ಡಾಲರ್ಸ್​​ ಕಾಲೋನಿಯಲ್ಲಿ ಸಚಿವ ಕತ್ತಿ ಅವರಿಗೆ ಹೃದಯಾಘಾತವಾಗಿದೆ.
ಬಾತ್​ರೂಂಗೆ ಹೋಗಿದ್ದ ಕತ್ತಿ ಅವರು ಕೆಲವು ನಿಮಿಷವಾದರೂ ಹೊರಬರದ ಕಾರಣ ಅನುಮಾನಗೊಂಡು ಮನೆಯವರು ಹೋಗಿ ನೋಡಿದಾಗ ಕತ್ತಿ ಅವರು ಬಾತ್​ರೂಂನಲ್ಲಿ ಕುಸಿದು ಬಿದ್ದಿದ್ದರು.
ಬಾತ್​ರೂಂನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಕತ್ತಿ ಅವರನ್ನು ತಕ್ಷಣವೇ ಸಮೀಪದಲ್ಲೇ ಇರುವ ಎಂ ಎಸ್​ ರಾಮಯ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.
ಆದರೆ ಅಷ್ಟೊತ್ತಿಗಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು ಎಂದು ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here