BJP: ಜಪಾನ್​ ಪ್ರವಾಸ ಅರ್ಧಕ್ಕೆ ಮೊಟಕುಗೊಳಿಸಿ ಸಚಿವ ಮುರುಗೇಶ್​ ನಿರಾಣಿ ವಾಪಸ್​ – ಕಾರಣ ಏನು..?

ವಿದೇಶ ಪ್ರವಾಸಕ್ಕೆ ತೆರಳಿದ್ದ ಬೃಹತ್​ ಕೈಗಾರಿಕೆ ಸಚಿವ ಮುರುಗೇಶ್​ ನಿರಾಣಿ (Murugesh Nirani) ಅವರು ತಮ್ಮ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಬೆಂಗಳೂರಿಗೆ (Bengaluru) ವಾಪಸ್​ ಆಗುತ್ತಿದ್ದಾರೆ.
ಕೆಲವೇ ದಿನಗಳಲ್ಲಿ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ನೇತೃತ್ವದ ಸಚಿವ ಸಂಪುಟ ಪುನರ್​ರಚನೆ ಆಗುವ ಸಾಧ್ಯತೆ ದಟ್ಟವಾಗಿರುವ ಹಿನ್ನೆಲೆಯಲ್ಲಿ ಪ್ರವಾಸ ಮೊಟಕುಗೊಳಿಸಿ ವಾಪಸ್​ ಆಗುತ್ತಿದ್ದಾರೆ.
ಮುರುಗೇಶ್​ ನಿರಾಣಿ ಅವರು 10 ದಿನಗಳ ಜಪಾನ್​ ಪ್ರವಾಸ ಕೈಗೊಂಡಿದ್ದರು.
ಆದರೆ ಉಳಿದ ಐದು ದಿನಗಳ ಪ್ರವಾಸ ಮೊಟಕುಗೊಳಿಸಿ ಇವತ್ತು ಜಪಾನ್ (Japan)​ ರಾಜಧಾನಿ ಟೋಕಿಯೋದಿಂದ (Tokyo) ಬೆಂಗಳೂರಿಗೆ ವಾಪಸ್​ ಆಗುತ್ತಿದ್ದಾರೆ.

LEAVE A REPLY

Please enter your comment!
Please enter your name here