ಕರ್ನಾಟಕದಲ್ಲಿರುವ (Karnataka) ಬಿಜೆಪಿ (BJP) ಸರ್ಕಾರದ ಮುಖ್ಯಮಂತ್ರಿ ಬದಲಾವಣೆ ಆಗಲಿದ್ದಾರೆ ಎಂಬ ಚರ್ಚೆ ಇನ್ನೂ ಜೀವಂತವಾಗಿದೆ.
ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಬೃಹತ್ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ (Murugesh Nirani) ಅವರ ಹುಟ್ಟುಹಬ್ಬದ ಹೊತ್ತಲ್ಲಿ ಅವರ ಅಭಿಮಾನಿಗಳು ಮುಂದಿನ ಮುಖ್ಯಮಂತ್ರಿ ನಿರಾಣಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಮುಂದಿನ ಮುಖ್ಯಮಂತ್ರಿಗಳು ಹಾಗೂ ಜಮಖಂಡಿ ಜಿಲ್ಲೆಯ ಕನಸನ್ನು ನನಸು ಮಾಡುವ ನಾಯಕ ಸಕ್ಕರೆ ನಾಡಿನ ಅಕ್ಕರೆಯ ನಾಯಕ ಕರ್ನಾಟಕ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಸನ್ಮಾನ ಶ್ರೀ ಮುರುಗೇಶ್ ಆರ್ ನಿರಾಣಿ ಅವರಿಗೆ 57ನೇ ಜನ್ಮದಿನದ ಶುಭಾಶಯಗಳು
ಎಂದು ಆಪ್ತ ಸಹಾಯಕ ಕಿರಣ್ ಬಡಿಗೇರ ಅವರು ಪೋಸ್ಟ್ ಹಂಚಿಕೊಂಡಿದ್ದಾರೆ.
ADVERTISEMENT
ADVERTISEMENT