ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾನಮಾನಕ್ಕಾಗಿ ರಾಜಕೀಯೇತರ ಚಳುವಳಿ ಮಾಡುವುದು ಸೂಕ್ತ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ್ ಅವರು ಹೇಳಿದ್ದಾರೆ.
ಪ್ರಮುಖ ಇಂಗ್ಲೀಷ್ ದೈನಿಕ ಇಂಡಿಯನ್ ಎಕ್ಸ್ಪ್ರೆಸ್ಗೆ ನೀಡಿದ ಸಂದರ್ಶನದಲ್ಲಿ ಪ್ರಮುಖ ಲಿಂಗಾಯತ ಮುಖಂಡರೂ ಆಗಿರುವ ಎಂ ಬಿ ಪಾಟೀಲ್ ಅವರು ಪ್ರತಿಕ್ರಿಯಿಸಿದ್ದಾರೆ.
2023-18ರ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಲಿಂಗಾಯತರಿಗೆ ಪ್ರತ್ತೇಕ ಸ್ಥಾನಮಾನದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು ನೀವು. ನೀವು ಮತ್ತೆ ಆ ಬೇಡಿಕೆಯನ್ನು ಮುಂದಿಡ್ತೀರಾ..? ಎಂದು ಕೇಳಲಾದ ಪ್ರಶ್ನೆಗೆ ಸಚಿವರು ಉತ್ತರಿಸಿದ್ದಾರೆ.
ಎಂ ಬಿ ಪಾಟೀಲ್ ಕೊಟ್ಟ ಉತ್ತರ: ಇಲ್ಲ, ಕಳೆದ ಚುನಾವಣೆಯಲ್ಲಿ ಬಿಜೆಪಿ ವಿಷಯವನ್ನು ರಾಜಕೀರಣಗೊಳಿಸಿತು. ಲಿಂಗಾಯತ ಪ್ರತ್ಯೇಕ ಧರ್ಮ ಬೇಡಿಕೆಯಲ್ಲಿ ನಾನು ಮೂರು ಸಭೆಗಷ್ಟೇ ಹಾಜರಾಗಿದ್ದೆ. ಆದರೆ ವಿಪಕ್ಷಗಳು (ಬಿಜೆಪಿ) ನನ್ನ ವಿರುದ್ಧ ದಾಳಿ ಮಾಡಿದವು. ಹೀಗಾಗಿ ರಾಜಕೀಯೇತರ ಚಳುವಳಿ ಮಾಡುವುದು ಸೂಕ್ತ . ಸ್ವಾಮೀಜಿಗಳು ಮತ್ತು ಸಮುದಾಯದ ಮುಖಂಡರು ನಿರ್ಧರಿಸುತ್ತಾರೆ.
ADVERTISEMENT
ADVERTISEMENT