Milk Price: ಹಾಲಿನ ದರ ಮತ್ತೆ ಹೆಚ್ಚಳ

Milk Price
Milk Price
ಹಾಲಿನ ದರ (MILK PRICE) ಮತ್ತೆ ಏರಿಕೆ ಆಗಿದೆ. ಪ್ರತಿ ಲೀಟರ್​ ಅಮುಲ್ (AMUL)​ ಹಾಲಿನ ಬೆಲೆಯನ್ನು ಗುಜರಾತ್​​ ಹಾಲು ಸಹಕಾರ ಒಕ್ಕೂಟ ಎರಡು ರೂಪಾಯಿಯಷ್ಟು ಹೆಚ್ಚಳ ಮಾಡಿದೆ.
2 ರೂಪಾಯಿ ದರ ಹೆಚ್ಚಳ ನಾಳೆಯಿಂದ ದೇಶಾದ್ಯಂತ ಅನ್ವಯ ಆಗಲಿದೆ.
ಕಳೆದ ಒಂದು ವರ್ಷದ ಅವಧಿಯಲ್ಲಿ ಪಶು ಆಹಾರದ ಬೆಲೆಯೇ ಶೇಕಡಾ 20ರಷ್ಟು ಹೆಚ್ಚಳ ಆಗಿದೆ ಮತ್ತು ಹಾಲು ಉತ್ಪಾದಕರಿಗೆ ನೀಡಲಾಗುತ್ತಿರುವ ಬೆಲೆ ಕೂಡಾ ಶೇಕಡಾ 8ರಿಂದ 9ರಷ್ಟು ಹೆಚ್ಚಳ ಆಗಿದೆ. ಈ ಹಿನ್ನೆಲೆಯಲ್ಲಿ ದರ ಏರಿಕೆ ಮಾಡಲಾಗಿದೆ
ಎಂದು ಅಮುಲ್​ ಹೇಳಿದೆ.
ಇತ್ತ ಮತ್ತೊಂದು ಹಾಲು ಉತ್ಪಾದಕ ಕಂಪನಿ ಮದರ್​ ಡೈರಿ (Mother Dairy) ಕೂಡಾ ಹಾಲಿನ ಬೆಲೆಯನ್ನು ಲೀಟರ್​ಗೆ 2 ರೂಪಾಯಿಯಷ್ಟು ಹೆಚ್ಚಳ ಮಾಡಿದೆ.
ಹೊಸ ದರ ನಾಳೆಯಿಂದ ಅನ್ವಯ ಆಗಲಿದೆ.

LEAVE A REPLY

Please enter your comment!
Please enter your name here