ಜಮ್ಮು ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತ ಉದ್ಯೋಗಿಯನ್ನು ಅವರ ಕಚೇರಿಯಲ್ಲಿಯೇ ಗುಂಡಿಟ್ಟು ಕೊಂದ ಕೆಲವೇ ದಿನಗಳಲ್ಲಿ ಇಂದು ಶಂಕಿತ ಉಗ್ರರು ದಕ್ಷಿಣ ಕಾಶ್ಮೀರದ ಕುಲ್ಗಾಮ್ ಪ್ರದೇಶದಲ್ಲಿ ಶಿಕ್ಷಕಿಯನ್ನು ಶಾಲೆಯೊಳಗೆ ಗುಂಡಿಟ್ಟು ಹತ್ಯೆಮಾಡಿದ್ದಾರೆ.
ಇಂದು ದಕ್ಷಿಣ ಕಾಶ್ಮೀರದ ಕುಲ್ಗಾಮ್ ಪ್ರದೇಶದ ಗೋಪಾಲ್ಪೋರಾ ಗ್ರಾಮದ ಸರ್ಕಾರಿ ಶಾಲೆಯೊಳಗೆ ಉಗ್ರರು ನುಗ್ಗಿ ಶಿಕ್ಷಕಿಯ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ ಎ.ದು ಅಧಿಕಾರಿಗಳು ತಿಳಿಸಿದ್ದಾರೆ. ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಗಂಭೀರವಾಗಿ ಗಾಯಗೊಂಡಿದ್ದ ಶಿಕ್ಷಕಿ ಸಾವನ್ನಪ್ಪಿದ್ದಾಳೆ.
ಮೃತ ಶಿಕ್ಷಕಿಯನ್ನು ಜಮ್ಮು ಪ್ರದೇಶದ ಸಾಂಬಾ ನಿವಾಸಿ ರಜನಿ ಎಂದು ಗುರುತಿಸಲಾಗಿದೆ.
ಕುಲ್ಗಾಮ್ನ ಗೋಪಾಲ್ಪೋರಾ ಪ್ರದೇಶದ ಹೈಸ್ಕೂಲ್ನಲ್ಲಿ ಒಬ್ಬ ಮಹಿಳಾ ಶಿಕ್ಷಕಿಯ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಪ್ರದೇಶವನ್ನು ಸುತ್ತುವರಿಯಲಾಗಿದೆ ಎಂದು ಜಮ್ಮ ಕಾಶ್ಮೀರದ ಪೊಲೀಸರು ಟ್ವೀಟ್ನಲ್ಲಿ ಹೇಳಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಕಾಶ್ಮೀರಿ ಪಂಡಿತ್ ಉದ್ಯೋಗಿ ರಾಹುಲ್ ಭಟ್ ಅವರನ್ನು ಕೇಂದ್ರ ಕಾಶ್ಮೀರದ ಚದೂರದಲ್ಲಿರುವ ಅವರ ಕಚೇರಿಯೊಳಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಮೇ 12 ರಂದು ರಾಹುಲ್ ಭಟ್ ಹತ್ಯೆಯ ನಂತರ ಬೃಹತ್ ಪ್ರತಿಭಟನೆಯನ್ನು ಮಾಡಲಾಗಿತ್ತು.
ಈ ಘಟನೆಯನ್ನು ಖಮಡಿಸಿರುವ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೆ ಮೆಹಬೂಬಾ ಮುಪ್ತಿಯವರು, ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ಈ ಘಟನೆಗಳು ಕಾಶ್ಮೀರದಲ್ಲಿ ಸಹಜ ಸ್ಥಿತಿ ಇದೆ ಎಂಬ ಬಿಜೆಪಿಗರ ನಕಲಿ ಹೇಳಿಕೆಗಳನ್ನು ತಳ್ಳಿಹಾಕಿದೆ. ಕಾಶ್ಮೀರ ಸಾಮಾನ್ಯವಾಗಿದೆ ಎಂಬ ಭಾರತ ಸರ್ಕಾರೆದ ನಕಲಿ ಹೇಳಿಕೆಗಳ ಹೊರತಾಗಿಯೂ ಉದ್ದೇಶಿತ ನಾಗರೀಕ ಹತ್ಯರಗಳು ಹೆಚ್ಚುತ್ತಿವೆ. ಇದು ಕಳವಳಕ್ಕೆ ಕಾರಣವಾಗಿದೆ ಎಮದು ಹೇಳಿದ್ದಾರೆ.
ರಾಷ್ಟ್ರೀಯ ಸಮ್ಮೇಳನ ಪಕ್ಷ ಉಪಾಧ್ಯಕ್ಷ ಹಾಗೂ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಇತ್ತೀಚೆಗೆ, ನಿರಾಯುಧ ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳ ಮಾಡಲಾಗುತ್ತಿದೆ. ಇದು ಉದ್ದೇಶಿತ ಹತ್ಯೆಯಾಗಿದೆ ಎಂದು ಹೇಳಿದ್ದಾರೆ.