Mikhail Gorbachev : ಶೀತಲ ಸಮಯ ಕೊನೆಗೊಳಿಸಿದ್ದ ನಾಯಕ ಇನ್ನಿಲ್ಲ

Mikhail Gorbachev

ಅಮೇರಿಕಾ-ರಷ್ಯಾ ನಡುವಿನ ಶೀತಲ ಸಮರವನ್ನು ಕೊನೆಗೊಳಿಸಿದ್ದ ಸೋವಿಯತ್ ನಾಯಕ ಮಿಖಾಯಿಲ್ ಗೋರ್ಬಚೆವ್ (Mikhail Gorbachev) ಅವರು ಮಂಗಳವಾರ ತಮ್ಮ 91ನೇ ವಯಸ್ಸಿಗೆ ನಿಧನರಾಗಿದ್ದಾರೆ.

ಗೋರ್ಬಚೇವ್ ಅವರು ಗಂಭೀರವಾದ ಹಾಗೂ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು, ಮಂಗಳವಾರ ಸಂಜೆ ನಿಧನರಾದರು ಎಂದು ರಷ್ಯಾದ ಸೆಂಟ್ರಲ್ ಕ್ಲಿನಿಕಲ್ ಆಸ್ಪತ್ರೆ ತಿಳಿಸಿದೆ.

ಇದನ್ನೂ ಓದಿ : ರಷ್ಯಾ ಅಧ್ಯಕ್ಷ ಪುಟಿನ್ ಇನ್ನು 2-3 ವರ್ಷವಷ್ಟೇ ಬದುಕಬಹುದಂತೆ..!

ಕೊನೆಯ ಸೋವಿಯತ್ ಅಧ್ಯಕ್ಷರಾದ ಗೋರ್ಬಚೇವ್ (Mikhail Gorbachev) ಅವರು ಅಮೆರಿಕ ಹಾಗೂ ಪಾಶ್ಚಿಮಾತ್ಯ ದೇಶಗಳೊಂದಿಗೆ ಶಸ್ತ್ರಾಸ್ತ್ರವನ್ನು ಕಡಿತಗೊಳಿಸುವ ಒಪ್ಪಂದಗಳನ್ನು ಮಾಡಿಕೊಂಡು ಶೀತಲ ಸಮರಕ್ಕೆ ಅಂತ್ಯ ಹಾಡಿದ್ದರು.

ಗೋರ್ಬಚೇವ್ ಅವರು ತಮ್ಮ 54ನೇ ವಯಸ್ಸಿನಲ್ಲಿ 1985ರಲ್ಲಿ ಸೋವಿಯತ್ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಬಳಿಕ ಅವರು ಸೀಮಿತ ರಾಜಕೀಯ ಮತ್ತು ಆರ್ಥಿಕ ಸ್ವಾತಂತ್ರ‍್ಯಗಳನ್ನು ಪರಿಚಯಿಸುವ ಮೂಲಕ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸಲು ಮುಂದಾಗಿದ್ದರು.

LEAVE A REPLY

Please enter your comment!
Please enter your name here