ನಾಳೆಯಿಂದ ಮೆಟ್ರೋ ಟ್ರೈನ್ ಸಮಯ ವಿಸ್ತರಣೆ

ನಾಳೆಯಿಂದ ಬೆಂಗಳೂರು ಮೆಟ್ರೋ ಅವಧಿ ವಿಸ್ತರಣೆ ಮಾಡಿ ಬಿಎಮ್​ಆರ್​ಸಿಎಲ್​ ಆದೇಶ ಹೊರಡಿಸಿದೆ.

ನಾಳೆ ಶನಿವಾರ ಬೆಳಗ್ಗೆ 6 ರಿಂದ ರಾತ್ರಿ 10 ರವರೆಗೆ ಮೆಟ್ರೋ ಸಂಚಾರ ಇರಲಿದೆ.

ಕೊನೆಯ ಮೆಟ್ರೋ ಟ್ರೇನ್ ಟರ್ಮಿನಲ್ ಸ್ಟೇಷನ್ ನಿಂದ ಹೊರಡುವುದು ರಾತ್ರಿ 9.30 ಕ್ಕೆ ಹೊರಡುವುದು.

ಈ ಮೊದಲು ಮೆಟ್ರೋ ಟ್ರೈನ್​ಗಳು ಬೆಳಿಗ್ಗೆ 7 ರಿಂದ 8 ರ ವರೆಗೆ ಮಾತ್ರ ಸಂಚರಿಸುತ್ತಿತ್ತು. ಮೆಟ್ರೋ ಅವಧಿಯನ್ನು ವಿಸ್ತರಿಸುವಂತೆ ಬೆಂಗಳೂರು ಸಂಸತ್​ ಸದಸ್ಯ ಪಿ.ಸಿ.ಮೋಹನ್ ಬಿಎಮ್​ಆರ್​ಸಿಎಲ್​​ ನಿರ್ದೇಶಕರಲ್ಲಿ ಮನವಿ ಮಾಡಿಕೊಂಡಿದ್ದರು.

LEAVE A REPLY

Please enter your comment!
Please enter your name here