ಈ 2 ದಿನ ಮೆಮೂ ರೈಲುಗಳ ಓಡಾಟ ರದ್ದು

ಎರಡು ದಿನ ತುಮಕೂರು ಮತ್ತು ಚಾಮರಾಜನಗರಕ್ಕೆ ಮೆಮೂ ರೈಲುಗಳ ಓಡಾಟ ರದ್ದಾಗಿದೆ. ಜೂನ್​ 14 ಮತ್ತು 15ರಂದು ಮೆಮೂ ರೈಲುಗಳ ಓಡಾಟ ರದ್ದಾಗಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
ತುಮಕೂರು-ಕೆಸಿಆರ್​ ಬೆಂಗಳೂರು ನಡುವಿನ ಮೆಮೂ ರೈಲು (06576) ಮತ್ತು ಕೆಸಿಆರ್​ ಬೆಂಗಳೂರು-ತುಮಕೂರು ನಡುವೆ ಸಂಚರಿಸುವ 06575 ಮೆಮೂ ರೈಲಿನ ಓಡಾಟವನ್ನು ಎರಡು ದಿನ ರದ್ದುಗೊಳಿಸಲಾಗಿದೆ.
ಯಶವಂತಪುರದಿಂದ ಚಾಮರಾಜನಗರಕ್ಕೆ ತೆರಳುವ 16240 ಸಂಖ್ಯೆ ಮೆಮೂ ರೈಲು ಮತ್ತು ಚಾಮರಾಜನಗರದಿಂದ ಯಶವಂತಪುರಕ್ಕೆ ತೆರಳುವ 16240 ಸಂಖ್ಯೆಯ ಮೆಮೂ ರೈಲುಗಳ ಓಡಾಟ ರದ್ದಾಗಿದೆ.
ಯಶವಂತಪುರದಲ್ಲಿ ಕೇಬಲಿಂಗ್​ ಕಾಮಗಾರಿ ಸಾಗುತ್ತಿರುವ ಹಿನ್ನೆಲೆಯಲ್ಲಿ ಎರಡು ದಿನ ಮೆಮೂ ರೈಲುಗಳ ಓಡಾಟ ರದ್​ದುಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.