ಸಬ್ ಇನ್ಸ್ ಪೆಕ್ಟರ್ ಆಕಾಂಕ್ಷಿ ಯುವತಿ ಮೇಲೆ ಚಲಿಸುವ ಕಾರಿನಲ್ಲಿ ರೇಪ್: ಸಾಮಾಜಿಕ ಜಾಲತಾಣದ ಗೆಳೆಯ ಅರೆಸ್ಟ್

ಮಥುರಾ : ಆಗ್ರಾದಿಂದ ಮರಳುತ್ತಿರುವ ಸಮಯದಲ್ಲಿ ಚಲಿಸುವ ಕಾರಿನಲ್ಲಿ 21 ವರ್ಷದ ಯುವತಿಯ ಮೇಲೆ ದುರುಳನೊಬ್ಬ ಅತ್ಯಾಚಾರ ಎಸಗಿದ್ದಾನೆ ಎಂದು ಗುರುವಾರ ಪೊಲೀಸರು ಹೇಳಿದ್ದಾರೆ.

ಮಂಗಳವಾರ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಯು ಸಬ್ ಇನ್ಸ್​ಸ್ಪೆಕ್ಟರ್ ಪರೀಕ್ಷೆಗೆ ಯುವತಿಯನ್ನು ಕರೆದೊಯ್ದಿದ್ದ. ಪರೀಕ್ಷೆ ಮುಗಿಸಿ ಮರಳುವ ಸಮಯದಲ್ಲಿ ಆರೋಪಿಯ ಚಲಿಸುವ ಕಾರಿನಲ್ಲಿ ಅತ್ಯಾಚಾರ ಎಸಗಿದ್ದಾನೆ.

ಕೃತ್ಯ ಎಸಗಿದ ನಂತರ ಆರೋಪಿ ಸಂತ್ರಸ್ತೆಯನ್ನ ಮಥುರಾ ನಗರದ ಹೊರವಲಯದ ಕೋಸಿ ಕಲನ್ ಎಂಬಲ್ಲಿ ಬಿಟ್ಟು ತೆರಳಿದ್ದಾನೆ.

ಪ್ರಮುಖ ಆರೋಪಿ ತೇಜ್ ವೀರ್​ನನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ತಲೆ ಮರೆಸಿಕೊಂಡಿದ್ದು, ಆತನನ್ನು ಹುಡುಕಲಾಗುತ್ತಿದೆ ಎಂದು ಪೊಲೀಸ್ ಮಹಾನಿರ್ದೇಶಕರಾದ ಶಿರಿಸ್ ಚಂದ್ರ ಅವರು ಹೇಳಿದ್ದಾರೆ.

ಇಬ್ಬರೂ ಆರೋಪಿಗಳು ಹರಿಯಾಣ ರಾಜ್ಯದ ಪಲ್ವಾಲದ ಮನ್​ಪುರ ಗ್ರಾಮದವರಾಗಿದ್ದಾರೆ. ಆರೋಪಿ ತೇಜ್​ವೀರ್ ಯುವತಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಪರಿಚಯಿಸಿಕೊಂಡು, ವಿಶ್ವಾಸಗಳಿಸಿಕೊಂಡಿದ್ದ.

ಸಂತ್ರಸ್ತ ಯುವತಿಯ ಅಣ್ಣ ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ್ದು, ಯುವತಿಯ ಮೆಡಿಕಲ್ ಚೆಕಪ್ ಮಾಡಲಾಗಿದೆ. ಕೃತ್ಯಕ್ಕೆ ಬಳಸಿದ ಕಾರನ್ನು ವಶಕ್ಕೆ ಪಡೆಯಲಾಗಿದೆ. ಇಬ್ಬರೂ ಆರೋಪಿಗಳು 22-25 ವಯಸ್ಸಿನವರಾಗಿದ್ದಾರೆ ಎಂದು ಪೊಲೀಸ್ ಪೊಲೀಸರು ಹೇಳಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here