4 ನೇ ಅಲೆಯ ನಿರ್ಬಂಧಕ್ಕಾಗಿ ಇಂದು ರಾಜ್ಯ ಸರ್ಕಾರ ನೂತನ ಮಾರ್ಗಸೂಚಿಯನ್ನು ಪ್ರಕಟ ಮಾಡಿದ್ದು, ರಾಜ್ಯದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ ಮಾಡಿ ಆದೇಶಿಸಿದೆ.
ಇಂದು ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನೂತನ ಕೊರೋನಾ ಮಾರ್ಗಸೂಚಿಗಳನ್ನು ಪ್ರಕಟ ಮಾಡಲಾಗಿದೆ. ಈ ಮಾರ್ಗಸೂಚಿಯ ಪ್ರಕಾರ, ರಾಜ್ಯದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ. ಆದರೆ, ಸದ್ಯಕ್ಕೆ ಯಾವುದೇ ರೀತಿಯ ದಂಡ ಹಾಕಲ್ಲ ಎಂದು ಹೇಳಲಾಗಿದೆ.
ಮಾಸ್ಕ್ ಧರಿಸುವುದು,ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ಸಾರ್ವಜನಿಕ ಸ್ಥಳಗಳಲ್ಲಿ, ಸಂಚಾರದ ವೇಳೆ ಉಗುಳುವುದನ್ನು ನಿರ್ಬಂಧಿಸಿ ಸರ್ಕಾರ ಆದೇಶ ಹೊರಡಿಸಿದೆ.
ಒಂದು ವೇಳೆ ಸಾರ್ವಜನಿಕ ಸ್ಥಳಗಳಲ್ಲಿ, ವಾಹನ ಸವಾರಿ, ಸಂಚರಿಸುವ ವೇಳೆ ಉಗುಳಿದರೆ ದಂಡ ಶುಲ್ಕ ವಿಧಿಸಲು ಸ್ಥಳೀಯ ಆಡಳಿತಕ್ಕೆ ಅಧಿಕಾರ ನೀಡಿ ಮುಖ್ಯ ಕಾರ್ಯದರ್ಶಿ ರವಿ ಕುಮಾರ್ ಆದೇಶ ಹೊರಡಿಸಿದ್ದಾರೆ.
ಬೆಂಗಳೂರಿನಲ್ಲಿ ಕೇಸ್ ಏರಿಳಿತ ಹೈ ಅಲರ್ಟ್ ಗೆ ಬಿಬಿಎಂಪಿ ಗೆ ಸರ್ಕಾರದ ಸೂಚನೆ ನೀಡಿದೆ. ಹೀಗಾಗಿ ಮತ್ತೆ ಮಾರ್ಷಲ್ಸ್ ಗಳು ಫೀಲ್ಡ್ ಗೆ ಇಳಿಯುವ ಸಾಧ್ಯತೆಯಿದೆ.
ಈಗಾಗಲೇ ಕೊರೋನಾ ಹೆಚ್ಚಳವಾಗಿರುವ ರಾಜ್ಯದಲ್ಲಿ ಕಡ್ಡಾಯ ಮಾಸ್ಕ್ ಜೊತೆಗೆ ದಂಡ ವಿಧಿಸಲಾಗುತ್ತಿದೆ. ಆದ್ರೇ ಸಧ್ಯ ಬೆಂಗಳೂರಿನಲ್ಲಿ ದಂಡ ವಿನಾಯತಿ ಇದೆ. ಬೆಂಗಳೂರಿನಲ್ಲಿ ಕೇಸ್ ಗಳ ಸಂಖ್ಯೆ ಹೆಚ್ಚಳವಾದ್ರೇ ದಂಡಾಸ್ತ್ರ ಪ್ರಯೋಗ ಫಿಕ್ಸ್ ಎಂದು ಸರ್ಕಾರ ಹೇಳಿದೆ.