ಮಸ್ಕಿ : ತಾಲೂಕಿನ ಮರಕಮದಿನ್ನಿ ಸರ್ಕಾರಿ ಪ್ರೌಢಶಾಲೆಯಲ್ಲಿ ಅದ್ದೂರಿಯಾಗಿ 75 ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಆಚರಿಸಲಾಯಿತು. ಇದೇ ವೇಳೆ ನೂತನವಾಗಿ ನಿರ್ಮಾಣಗೊಂಡ ಭೋಜನಾಲಯದ ಉದ್ಘಾಟನೆ ಮಾಡಲಾಯಿತು.
ಪ್ರೌಢ ಶಾಲಾ ಆವರಣದಲ್ಲಿ ಅಮೃತ ಮಹೋತ್ಸವದ ಕಾರ್ಯಕ್ರಮ ನಡೆಯಿತು. ಸ್ವಾತಂತ್ರ್ಯ ದಿನಾಚರಣೆಗೆ ಶಾಲೆಯ ಮಕ್ಕಳು ಸೇರಿದಂತೆ ಗ್ರಾಮದ ಮುಖಂಡರು, ಹಿರಿಯರು ಹಾಗೂ ಹಳೆಯ ವಿದ್ಯಾರ್ಥಿಗಳು ನೆರೆದಿದ್ದರು. ಶಾಲಾ ಅಭಿವೃದ್ಧಿ ಮೇಲುಸ್ತುವಾರಿ ಸಮಿತಿಯ(ಎಸ್ ಡಿಎಂಸಿ) ಅಧ್ಯಕ್ಷ ಈರಣ್ಣ ಜೆಡಿ ಧ್ವಜಾರೋಹಣ ನೆರವೇರಿಸಿದರು. ಶಾಲಾ ಮುಖ್ಯಗುರುಗಳಾದ ಶ್ರೀಮತಿ ಕಮಲಾಕ್ಷಿ ಸಾಥ್ ನೀಡಿದರು.
ಇದೇ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡ ಭೋಜನಾಲಯವನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ದೇವಮ್ಮ ರಿಬ್ಬನ್ ಕಟ್ ಮಾಡುವ ಮೂಲಕ ಉದ್ಘಾಟನೆ ಮಾಡಿದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂದೇಶ್ ಹಾಗೂ ಗ್ರಾಮುದ ಮುಖಂಡರಾದ ಶರಣೇಗೌಡ ಸಾಥ್ ನೀಡಿದರು.
ಈ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪಿಡಿಓ ಸಂದೇಶ್ ಅವರು ಶಾಲೆಯ ಅಭಿವೃದ್ಧಿ ಹಾಗೂ ಮಕ್ಕಳ ಗುಣಾತ್ಮಕ ಕಲಿಕೆ ಹಾಗೂ ಶಿಕ್ಷಕರ ಶ್ರಮವನ್ನು ಶ್ಲಾಘಿಸಿದರು. ಮುಖ್ಯಗುರುಗಳು ಮಾತನಾಡಿ, ಗ್ರಾಮದ ಮುಖಂಡರಿಗೆ ಶಾಲೆಯ ಬಗ್ಗೆ ಇರುವ ಕಾಳಜಿಗೆ ಧನ್ಯವಾದ ಅರ್ಪಿಸಿದರು. ಶಿಕ್ಷಕರಾದ ಗೂಳಪ್ಪ ದೇಶ ಅಭಿವೃದ್ಧಿಯಲ್ಲಿ ರೈತರ ಶ್ರಮವನ್ನು ನೆನೆದರು. ಶಿಕ್ಷಕ ಪಕೀರಪ್ಪ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಡಿದ ಸ್ಮರಣೀಯರನ್ನು ನೆನೆದರು.
ಧ್ವಜಾರೋಹಣದ ನಂತರ ನಡೆದ ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡ ಶರಣಪ್ಪನವರು ಕಳೆದ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪ್ರಥಮ ಮತ್ತು ದ್ವಿತಿಯ ಸ್ಥಾನ ಪಡೆದ ವಿದ್ಯಾರ್ಥಿಗಳಾದ ಪದ್ಮಾ ಹಾಗೂ ವಿಜಯಲಕ್ಷ್ಮಿಯವರಿಗೆ ಗೌರವಧನ ನೀಡಿ ಗೌರವಿಸಿದರು. ಭಾಷಾವಾರು ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಆಯಾ ಶಿಕ್ಷಕರೇ ಗೌರವಧನ ನೀಡಿ ಸನ್ಮಾನಿಸಿದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಕಮಲಾಕ್ಷಿ, ಸಹ ಶಿಕ್ಷಕರಾದ ಅಮರೇಶ್, ಗೂಳಪ್ಪ, ರವಿಕುಮಾರ್, ತಿರುಪತಿ, ಶ್ರೀಮತಿ ಸುಮಂಗಲ, ಫಕೀರಪ್ಪ, ವೆಂಕಟೇಶ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ದೇವಮ್ಮ, ಪಿಡಿಓ ಸಂದೇಶ್, ಮುಖಂಡರಾದ ಶರಣೇಗೌಡ, ಶರಣಪ್ಪ, ದೊಡ್ಡನಂದಪ್ಪ, ಈರಣ್ಣ, ಮಹಾದೇವಪ್ಪ, ತುರುಮಂದೆಪ್ಪ, ಈರಣ್ಣ ಜೆಡಿ, ಗ್ರಾಮದ ಯುವಕರು ಮತ್ತಿತರರು ಹಾಜರಿದ್ದರು.