ಮಂತ್ರಿ ಗ್ರೂಪ್ಗಳ ಮಾಲೀಕ ಸುನಿಲ್ ಮಂತ್ರಿಯನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.
ಸುಶಿಲ್ ಮಂತ್ರಿ ಅಕ್ರಮ ಹಣ ವರ್ಗಾವಣೆಯಲ್ಲಿ ಭಾಗಿ ಆಗಿರುವ ಅನುಮಾನ ಹಿನ್ನೆಲೆಯಲ್ಲಿ ಈಡಿ ಬಂಧಿಸಿದೆ.
ಸುಶಿಲ್ ಮಂತ್ರಿ ಮಾಲೀಕತ್ವದ Mantri Developers ಬೆಂಗಳೂರಲ್ಲಿ ಮಂತ್ರಿ ಮಾಲ್ ಸೇರಿದಂತೆ ಹಲವು ಕಟ್ಟಡಗಳನ್ನು ಕಟ್ಟಿದೆ.
Mantri Developers ದಕ್ಷಿಣ ಭಾರತದ ಅತೀ ದೊಡ್ಡ ಕಟ್ಟಡ ನಿರ್ಮಾಣ ಕಂಪನಿ. ಸುಶಿಲ್ ಮಂತ್ರಿ ಕಂಪನಿ ಹೆಸರಲ್ಲಿ ವಿವಿಧ ಹಣಕಾಸು ಸಂಸ್ಥೆಗಳಿAದ 5 ಸಾವಿರ ಕೋಟಿ ರೂಪಾಯಿಯಷ್ಟು ಸಾಲ ಪಡೆದಿದ್ದ. ಆದರೆ 1 ಸಾವಿರ ಕೋಟಿ ರೂಪಾಯಿಯಷ್ಟು ಸಾಲವನ್ನು ಬಾಕಿ ಉಳಿಸಿಕೊಂಡಿದ್ದ. ಈತ ಪಡೆದಿದ್ದ ಹಲವು ಸಾಲಗಳ ನಿಷ್ಪçಯೋಜಕ ಸಾಲಗಳಾಗಿ ಬದಲಾಗಿದ್ದವು.
ಈತನ ವಿರುದ್ಧ ಈಡಿ 2020ರಲ್ಲಿ ಪ್ರಕರಣ ದಾಖಲಿಸಿಕೊಂಡಿತ್ತು. ಅಪಾರ್ಟ್ಮೆಂಟ್ ನಿರ್ಮಾಣಕ್ಕಾಗಿ ಗ್ರಾಹಕರಿಂದ ಮುಂಗಡವಾಗಿ ಸಾವಿರ ಕೋಟಿ ರೂಪಾಯಿಯಷ್ಟು ಹಣ ಸಂಗ್ರಹಿಸಿದ್ದ. ಆದರೆ ಗ್ರಾಹಕರಿಗೆ ನಿಗದಿತ ಸಮಯಕ್ಕೆ ಫ್ಲಾö್ಯಟ್ಗಳನ್ನು ನೀಡುತ್ತಿರಲಿಲ್ಲ. ಈತನ ವಿರುದ್ಧ ಗ್ರಾಹಕರು ಪೊಲೀಸರು ಮತ್ತು ಈಡಿಗೆ ದೂರು ನೀಡಿದ್ದರು.