ಕರ್ನಾಟಕ ಗೆದ್ದ ಮರು ದಿನವೇ ಮನೀಷ್‌ ಪಾಂಡೆಗೆ ಕಂಕಣ..!

ಐಪಿಎಲ್‌ ಆಟಗಾರ ಮತ್ತು ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ ಮನೀಷ್‌ ಪಾಂಡೆ ಮದುವೆ ಆಗಿದ್ದಾರೆ. ಪಾಂಡೆ ಕೈ ಹಿಡಿದಿದ್ದು ತುಳುನಾಡ ಸುಂದರಿ, ಬಂಟ ಸಮುದಾಯಕ್ಕೆ ಸೇರಿದ ಆಶ್ರಿತಾ ಶೆಟ್ಟಿ.

ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಫೈನಲ್‌ ಪಂದ್ಯದಲ್ಲಿ ತಮಿಳುನಾಡು ತಂಡವನ್ನು ಅಚ್ಚರಿಯ ರೀತಿಯಲ್ಲಿ ಸೋಲಿಸಿ ಕರ್ನಾಟಕ ವಿಜಯ ಪತಾಕೆ ಹಾರಿಸಿದ ಮರು ದಿನವೇ ಕರ್ನಾಟಕ ತಂಡದ ನಾಯಕ ತಮ್ಮ ಬದುಕಿನ ಸಂಸಾರದ ಇನ್ನಿಂಗ್ಸ್‌ ಆರಂಭಿಸಿದ್ದಾರೆ. ೩೦ ವರ್ಷದ ಪಾಂಡೆ ನಾಯಕತ್ವದಲ್ಲಿ ಈ ವರ್ಷವೇ ಕರ್ನಾಟಕ ವಿಜಯ್‌ ಹಜಾರೆ ಟ್ರೋಫಿಯನ್ನೂ ಜಯಿಸಿತ್ತು.

ಆಶ್ರಿತಾ ಶೆಟ್ಟಿ ಪ್ರಸಿದ್ಧ ತುಳು ಸಿನಿಮಾ ತೆಲಿಕದ ಬೊಳ್ಳಿ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದಾರೆ. ಉದಯಂ ಎನ್‌ಎಚ್‌೪ ಸೇರಿದಂತೆ ತಮಿಳಿನ ಮೂರು ಸಿನಿಮಾಗಳಲ್ಲೂ ಆಶ್ರಿತಾ ಕಾಣಿಸಿಕೊಂಡಿದ್ದಾರೆ.

ಭಾನುವಾರ ಲಕ್ನೋದಲ್ಲಿ ನಡೆದಿದ್ದ ಫೈನಲ್‌ನಲ್ಲಿ ೪೮ ಎಸೆತಗಳಲ್ಲಿ ೬೦ ರನ್‌ ಗಳಿಸುವ ಮೂಲಕ ನಾಯಕನ ಆಟವಾಡಿದ್ದ ಪಾಂಡೆ ವೆಸ್ಟ್‌ಇಂಡೀಸ್‌ ವಿರುದ್ಧದ ಪಂದ್ಯಗಳಿಗೂ ಟೀಂ ಇಂಡಿಯಾಕ್ಕೆ ಆಯ್ಕೆ ಆಗಿದ್ದಾರೆ. ಆದ್ರೆ ತಮ್ಮ ದೊಡ್ಡ ಸೀರಿಸ್‌ ನಾಳೆಯಿಂದ ಆರಂಭವಾಗುತ್ತೆ ಎಂದು ನಿನ್ನೆ ಗೆದ್ದ ಬಳಿಕ  ಮನೀಷ್‌ ಪಾಂಡೆ ಹೇಳಿದ್ದರು.

LEAVE A REPLY

Please enter your comment!
Please enter your name here