ಮಣಿಪುರದಲ್ಲಿ ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಕುಕಿ ಪೀಪಲ್ಸ್ ಅಲಯನ್ಸ್ ಹಿಂಪಡೆದಿದೆ.
ಮಣಿಪುರ ರಾಜ್ಯಪಾಲೆ ಅನುಸೂಯ ಯುಕೈ ಅವರಿಗೆ ಸಲ್ಲಿಸಿರುವ ಪತ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಬೆಂಬಲ ವಾಪಸ್ ಪಡೆಯುವ ನಿರ್ಧಾರ ಪ್ರಕಟಿಸಿದೆ.
ಪ್ರಸ್ತುತ ಹಿಂಸಾಚಾರದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎನ್ ಬಿರೆನ್ ಸಿಂಗ್ ಅವರ ನೇತೃತ್ವದ ಸರ್ಕಾರಕ್ಕೆ ನೀಡಲಾಗಿರುವ ಬೆಂಬಲ ವಾಪಸ್ ಪಡೆಯುತ್ತಿರುವುದಾಗಿ ಕೆಪಿಎ ಅಧ್ಯಕ್ಷ ತಾಂಗ್ಮ್ಯಾಂಗ್ ಹಾವೋಕಿಪ್ ಹೇಳಿದ್ದಾರೆ.
60 ಶಾಸಕರ ಮಣಿಪುರ ವಿಧಾನಸಭೆಯಲ್ಲಿ ಕೆಪಿಎ ಇಬ್ಬರನ್ನು ಶಾಸಕರನ್ನು ಹೊಂದಿದೆ.
ಬಿಜೆಪಿ 32 ಶಾಸಕರನ್ನು ಹೊಂದಿದ್ದು, ನ್ಯಾಷನಲ್ ಪೀಪಲ್ಸ್ ಫ್ರಂಟ್ನ ಐವರು ಶಾಸಕರು ಮತ್ತು ಮೂವರು ಪಕ್ಷೇತರ ಶಾಸಕರ ಬೆಂಬಲ ಹೊಂದಿದೆ. ಹೀಗಾಗಿ ಬಿರೆನ್ ಸಿಂಗ್ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ.
ಜುಲೈ 18ರಂದು ನವದೆಹಲಿಯಲ್ಲಿ ನಡೆದಿದ್ದ ಎನ್ಡಿಎ ಸಭೆಯಲ್ಲಿ ಭಾಗವಹಿಸಿದ್ದ 38 ಪಕ್ಷಗಳ ಪೈಕಿ ಕೆಪಿಎ ಕೂಡಾ ಒಂದಾಗಿತ್ತು. ಮಣಿಪುರದಲ್ಲಿ 2 ಲೋಕಸಭಾ ಕ್ಷೇತ್ರಗಳಿವೆ.
ADVERTISEMENT
ADVERTISEMENT