ಮಂಗಳೂರಲ್ಲಿ SDPI PFI ಕಾರ್ಯಕರ್ತರ ಮನೆ ಮೇಲೆ ದಾಳಿ..!

Pasmanda Muslims

ಮಂಗಳೂರು: ನಗರದಲ್ಲಿ ಮತ್ತೇ ಪಿಎಫ್ ಐ ಮತ್ತು ಎಸ್ ಡಿಪಿಐ ಮುಖಂಡರ ಮನೆಗಳಿಗೆ ಪೊಲೀಸರು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಪಣಂಬೂರು, ಉಳ್ಳಾಲ, ಬಜಪೆ ಠಾಣೆ ವ್ಯಾಪ್ತಿಯ 9 ಕಡೆ ಪೊಲೀಸ್ ದಾಳಿ ನಡೆದಿದ್ದು, ಐವರನ್ನು ವಶಕ್ಕೆ ಪಡೆದಿದ್ದಾರೆ.

ಎಸ್ಟಿಪಿಐ ಜಿಲ್ಲಾಧ್ಯಕ್ಷ ಅಬುಬಕ್ಕರ್ ಕುಳಾಯಿ ಮನೆಯಲ್ಲೂ ಪೊಲೀಸರು ಶೋಧ ನಡೆಸಿದ್ದು, ವಿಶೇಷ ತಂಡಗಳನ್ನು ರಚಿಸಿ ನಸುಕಿನಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. 7 ಮಂದಿ ಪಿ ಎಫ್ ಐ ಮುಖಂಡರನ್ನು ವಶಕ್ಕೆ ಪಡೆದಿರುವ ಮಾಹಿತಿ ಲಭಿಸಿದ್ದು, ಸೆ.27ರಂದು ದಾಳಿ ನಡೆಸಿದ್ದ ವೇಳೆ 26 ಮಂದಿಯನ್ನು ವಶಕ್ಕೆ ಪಡೆಯಲು ಪೊಲೀಸರು ಲಿಸ್ಟ್ ಮಾಡಿಕೊಂಡಿದ್ದರು ಎನ್ನಲಾಗಿದೆ.

ಆ ಪೈಕಿ 12 ಮಂದಿ ತಪ್ಪಿಸಿಕೊಂಡಿದ್ದು ಅವರಿಗಾಗಿ ಶೋಧ ನಡೆಸಲಾಗಿದ್ದು, ಪಣಂಬೂರು ಠಾಣೆ ವ್ಯಾಪ್ತಿಯಲ್ಲಿ ಮೊಹಮ್ಮದ್ ರಫೀಕ್ @ ಶಾರ್ಟ್ ರಫೀಕ್ ಜೋಕಟ್ಟೆ, ಮೊಹಮ್ಮದ್ ಬಿಲಾಲ್, ಕಸಬಾ ಬೆಂಗ್ರೆ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ. ಉಳ್ಳಾಲ ಠಾಣೆ ಪೊಲೀಸರು ಮೊಹಮ್ಮದ್ ರಫೀಕ್, ಅಬ್ಬಾಸ್ ಕಿನ್ಯಾ ಎಂಬವರನ್ನು ವಶಕ್ಕೆ ಪಡೆದಿದ್ದಾರೆ. ಕಂಕನಾಡಿ ಗ್ರಾಮಾಂತರ ಅಡ್ಯಾರಿನಿಂದ ಅಕ್ಬಾರ್ ಸಿದ್ದೀಕ್ ಎಂಬಾತನನ್ನು ವಶಕ್ಕೆ ಪಡೆದ ಮಾಹಿತಿ ಇದೆ.