ಮಂಗಳೂರು ನಗರದ ಹೊರವಲಯದ ಮೂಲ್ಕಿ ಸಮೀಪದ ಪಾವಂಜೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ಮತ್ತು ಓಮ್ನಿ ವಾಹನಗಳು ಮುಖಾಮುಖಿ ಡಿಕ್ಕಿಯಾಗಿದ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾಗಿದ್ದ ಈ ಘಟನೆಯ ಭೀಕರ ದೃಶ್ಯ ಇದೀಗ ಹೊರಬಂದಿದೆ.
ಮೂಲ್ಕಿ ಸಮೀಪದ ಪಾವಂಜೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಬಸ್ ಮತ್ತು ಓಮ್ನಿ ವಾಹನಗಳು ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿತ್ತು.
ಮೃತರನ್ನ ಚಾಲಕ ಭುಜಂಗ (58 ವರ್ಷ) ಹಾಗೂ ವಸಂತ ಕುಂದರ್ ಎಂದು ಗುರುತಿಸಲಾಗಿದೆ. ಗಾಯಾಳು ಬಾಲಕೃಷ್ಣ ಎಂಬುವವರು ಚಿಕಿತ್ಸೆಯಲ್ಲಿದ್ದಾರೆ. ಎಲ್ಲರೂ ಮೂಲ್ಕಿ ಸಮೀಪದ ಪಡ್ರೆ ನಿವಾಸಿಗಳಾಗಿದ್ದಾರೆ. ಓಮ್ನಿ ಕಾರು ಚಾಲಕನ ನಿರ್ಲಕ್ಷ್ಯತನದಿಂದ ಈ ಘಟನೆ ಸಂಭವಿಸಿದೆ ಎಂಬುದು ಬಹಿರಂಗವಾದ ದೃಶ್ಯದಿಂದ ತಿಳಿದುಬರುತ್ತದೆ.
ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.