ಮಂಗಳೂರು : ರಾತ್ರೋರಾತ್ರಿ ಹಾಸ್ಟೆಲ್​ನ​ ಕಿಟಕಿ ಮುರಿದು ಮೂವರು ವಿದ್ಯಾರ್ಥಿನಿಯರು ಪರಾರಿ

ಮಂಗಳೂರಿನ ಖಾಸಗಿ ಪಿಯು ಕಾಲೇಜಿನ ಹಾಸ್ಟೆಲ್​ನ ಮೂವರು ವಿದ್ಯಾರ್ಥಿನಿಯರು ರಾತ್ರೋರಾತ್ರಿ ಪರಾರಿಯಾಗಿರುವ ಘಟನೆ ನಡೆದಿದೆ.

ಮಂಗಳೂರಿನ ಮೇರಿಹಿಲ್ ಕ ಏರ್​ಪೋರ್ಟ್​ ರಸ್ತೆಯಲ್ಲಿರುವ ಕಾಲೇಜ್​ನಿಂದ ವಿದ್ಯಾರ್ಥಿನಿಯರು ಪರಾರಿಯಾಗಿದ್ದಾರೆ. ಹಾಸ್ಟೆಲ್​ನ ಸಿಸಿಟಿವಿಯಲ್ಲಿ ವಿದ್ಯಾರ್ಥಿನಿಯರು ತಮ್ಮ ಲಗೇಜ್ ಸಮೇತ ಹೋಗುತ್ತಿರುವುದು ಸೆರೆಯಾಗಿದೆ.

ಪಿಯುಸಿ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿನಿಯರು ಬೆಳಗಿನ ಜಾವ 3 ಗಂಟೆಗೆ ಹಾಸ್ಟೆಲ್​ ಕಿಟಕಿ ಮುರಿದು ಪರಾರಿಯಾಗಿದ್ದಾರೆ. ‘ನಾವು ಹೋಗುತ್ತಿದ್ದೇವೆ ಕ್ಷಮಿಸಿ’ ಎಂದು ಮೂವರು ವಿದ್ಯಾರ್ಥಿನಿಯರು ಪತ್ರ ಬರೆದಿಟ್ಟು ಹೋಗಿದ್ದಾರೆ ಎನ್ನಲಾಗಿದೆ.

ಪರಾರಿಯಾದವರನ್ನು ಬೆಂಗಳೂರಿನ ಇಬ್ಬರು ವಿದ್ಯಾರ್ಥಿನಿಯರು ಹಾಗೂ ಚಿತ್ರದುರ್ಗದ ಒಬ್ಬ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ಕಂಕನವಾಡಿ ನಗರ ಪೊಲೀಸ್ ಠಾಣೆಯ ಪೊಲೀಸರು ಪರಿಶೀಲನೆ ಆರಂಭಿಸಿದ್ದಾರೆ. ಇದನ್ನೂ ಓದಿ : ಪ್ರತಿಷ್ಠಿತ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ನಾಪತ್ತೆ

LEAVE A REPLY

Please enter your comment!
Please enter your name here