ಅಬ್ಬಬ್ಬಾ..! ಕಾಳಿಂಗನಿಗೂ ಸ್ನಾನ!

ಕಿಂಗ್ ಕೋಬ್ರಾ, ಅಥವಾ ಕಾಳಿಂಗ ಸರ್ಪ.. ಇದು ಅತ್ಯಂತ ವಿಷಪೂರಿತ ಹಾವುಗಳಲ್ಲಿ ಒಂದಾಗಿದೆ. ಇದನ್ನು ನೋಡಿದ್ರೆ ಸಾಕು ಎಂತಹವರೂ ಹೆದರುತ್ತಾರೆ. ಆದರೆ, ಬೇಸಿಗೆಯ ಬಿಸಿಯಲ್ಲಿ ಬೆಂದಿದ್ದ ಕಾಳಿಂಗ ಶಾಂತ ರೀತಿಯಿಂದ ನೀರಿಗೆ ತಲೆಯೊಡ್ಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಐಎಫ್‌ಎಸ್ ಅಧಿಕಾರಿ ಸುಸಂತಾ ನಂದಾ ಅವರು ಟ್ವಿಟರ್‌ನಲ್ಲಿ ಈ ವೀಡಿಯೋ ಕ್ಲಿಪ್ ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ, ಕಾಡಿನಿಂದ ನಾಡಿಗೆ ಬಂದ ಕಾಳಿಂಗ ಸರ್ಪವೊಂದು ಬಿಸಿಲ ಬೇಗೆಯನ್ನು ತಡೆಯಲಾರದೇ ಮನೆಯೊಂದರ ಬಳಿ ಬಂದಿದೆ. ವ್ಯಕ್ತಿಯೊಬ್ಬ ಬಕೆಟ್​​ನಲ್ಲಿ ನೀರು ತುಂಬಿ ಕಾಳಿಂಗನ ತಲೆಯ ಮೇಲೆ ನೀರು ಸುರಿಯುವುದನ್ನು ಕಾಣಬಹುದು. ಕಾಳಿಂಗವು ಈ ಸ್ನಾನವನ್ನು ಎಂಜಾಯ್ ಮಾಡಿದೆ.

ಬೇಸಿಗೆ ಕಾಲದಲ್ಲಿ ಕಾಡಿನಲ್ಲೂ ನೀರು ಹೆಚ್ಚಿಗೆ ಇರುವುದಿಲ್ಲ. ಹೀಗಾಗಿ ಹಾವುಗಳು, ಪ್ರಾಣಿ ಪಕ್ಷಿಗಳು ಈ ಸಮಯದಲ್ಲಿ ನೀರನ್ನು ಮತ್ತು ಆಹಾರವನ್ನು ಅರಸಿ ನಾಡಿಗೆ ಬರುತ್ತವೆ. ಈ ವೇಳೆ ಕೆಲವರ ಅವುಗಳನ್ನು ಹೊಡೆದು ಕೊಲ್ಲುತ್ತಾರೆ. ಆದರೆ ಈ ವಿಡಿಯೋದಲ್ಲಿ ಹಾವಿನ ಕಷ್ಟವನ್ನು ತಿಳಿದ ವ್ಯಕ್ತಿ ಅದಕ್ಕೆ ನೀರಿನಿಂದ ಸ್ನಾನ ಮಾಡಿಸಿ ಮಾನವೀಯತೆ ಮೆರೆದಿದ್ದಾನೆ.

 

ಈ ವೀಡಿಯೋ ಇಷ್ಟ ಆಗಿದ್ರೆ ಫೇಸ್​ಬುಕ್​​ನಲ್ಲಿ ಈ ಪೋಸ್ಟ್​​ನ್ನು ಬೇರೆಯವರಿಗೂ ಶೇರ್ ಮಾಡಿ

LEAVE A REPLY

Please enter your comment!
Please enter your name here