ADVERTISEMENT
ಗುಜರಾತ್‌ನ ವಡೋದರಾದಲ್ಲಿ ನಡೆಯುತ್ತಿರುವ ವೆಸ್ಟ್‌ಇಂಡೀಸ್ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ (IND Women vs WI Women, 2nd ODI at Vadodara,IND Women vs WI Women) ಭಾರತ ಮಹಿಳಾ ಕ್ರಿಕೆಟ್ ದಾಖಲೆ ಬರೆದಿದೆ. 50 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 358 ರನ್ ಗಳಿಸಿದೆ. ಈ ಮೂಲಕ ವಿಂಡೀಸ್‌ಗೆ ಗೆಲ್ಲುವುದಕ್ಕೆ ಅತೀ ದೊಡ್ಡ ಮೊತ್ತದ ಗುರಿಯನ್ನು ನೀಡಿದೆ.
ಈ ಪಂದ್ಯದಲ್ಲಿ ಹರ್ಲೀನ್ ದಿಯೋಲ್ (Harleen Deol) ಅವರು ಚೊಚ್ಚಲ ಅಂತಾರಾಷ್ಟ್ರೀಯ ಏಕದಿನ ಶತಕ ಸಿಡಿಸಿದ್ದಾರೆ. 103 ಎಸೆತಗಳನ್ನು ಎದುರಿಸಿದ ಹರ್ಲೀನ್ ದಿಯೋಲ್ 115 ರನ್ ಗಳಿಸಿದರು. 135 ನಿಮಿಷ ಬ್ಯಾಟಿಂಗ್ ಮಾಡಿದ್ದ ದಿಯೋಲ್ 16 ಬೌಂಡರಿಗಳನ್ನು ಬಾರಿಸಿ ಭಾರತ ಬೃಹತ್ ಮೊತ್ತ ಕಲೆ ಹಾಕುವುದಕ್ಕೆ ಕಾರಣಕರ್ತರಾದರು.
27 ವರ್ಷದ ದಿಯೋಲ್ ಅವರು ಮಹಿಳಾ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡದಲ್ಲಿದ್ದಾರೆ.
ಸ್ಮೃತಿ ಮಂದಾನ 53 ರನ್ ಗಳಿಸಿದ್ರೆ, ಪ್ರತಿಕಾ ರಾವಲ್ (pratika rawal pratika rawal cricketer) 76 ರನ್ ಗಳಿಸಿದ್ರು. ಜೆಮಿಮಾ ರೋಡಿಗ್ರಸ್ 36 ಎಸೆತಗಳಲ್ಲಿ 52 ರನ್ ಗಳಿಸಿದ್ದಾರೆ.
ADVERTISEMENT