ನಟ ಮಹೇಶ್ ಬಾಬುಗೆ ಕೊರೋನಾ ಪಾಸಿಟಿವ್-

ತೆಲುಗು ಚಿತ್ರರಂಗದ ಖ್ಯಾತ ನಟ ಮಹೇಶ್ ಬಾಬು ಅವರಿಗೆ ಕೊರೋನಾ ಸೋಂಕು ದೃಢವಾಗಿದೆ.  ನನಗೆ ಕೊರೋನಾ ಸೋಂಕು ದೃಢವಾಗಿದೆ. ಲಘು ಪ್ರಮಾಣದ ಕೊರೋನಾ ಲಕ್ಷಣಗಳಿವೆ ಎಂದು ಅವರು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಈ ಬಗ್ಗೆ ಟ್ವಿಟ್ ಮಾಡಿರುವ ಅವರು, ನನಗೆ ಕೊರೋನಾ ಸೋಂಕು ದೃಢವಾಗಿದೆ. ಕೊರೋನಾ ಸೋಂಕಿನ ಲಘು ಲಕ್ಷಣಗಳಿವೆ. ಪ್ರಸ್ತುತ ನಾನು ಮನೆಯಲ್ಲಿಯೇ ಐಸೋಲೇಟ್ ಆಗಿದ್ದೇನೆ.

ನನ್ನೊಂದಿಗೆ ಇತ್ತೀಚೆಗೆ ಸಂಪರ್ಕಕ್ಕೆ ಬಂದವರು ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಿ. ನಾನು ಈ ಮೂಲಕ ಮನವಿ ಮಾಡಿಕೊಳ್ಳುತ್ತೇನೆ. ಕೊರೋನಾದ ನಿಯಂತ್ರಣಕ್ಕಾಗಿ ಎಲ್ಲರೂ ಲಸಿಕೆ ಪಡೆಯಿರಿ ಎಂದು ಹೇಳಿದ್ದಾರೆ.

ಇವರ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ನಟ ಜೂ.ಎನ್​ಟಿಆರ್​ ಬೇಗನೆ ಗುಣಮುಖರಾಗಿ ಬನ್ನಿ ಅಣ್ಣ ಎಂದು ಹೇಳಿದ್ದಾರೆ.

ಕೊರೋನಾ ಎರಡನೇ ಅಲೆಯ ನಂತರ ಜೂನ್​ ತಿಂಗಳಲ್ಲಿ ನಟ ಮಹೇಶ್ ಬಾಬು ತನ್ನ ಪತ್ಇಯೊಂದಿಗೆ ತಮ್ಮ ಸಂಸ್ಥೆಯಿಂದ ಉಚಿತ ಕೊರೋನಾ ಲಸಿಕಾ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರು.

LEAVE A REPLY

Please enter your comment!
Please enter your name here