ಮಹಾರಾಷ್ಟ್ರದ ನಾಗ್ಪುರ ನಗರದಲ್ಲಿ 11 ವರ್ಷದ ಬಾಲಕಿಯ ಮೇಲೆ ಒಂದು ತಿಂಗಳುಗಳ ಕಾಲ ನಿರಂತರವಾಗಿ ಸಾಮೂಹಿಕ ಅತ್ಯಾಚಾರ ಎಸಗಿದ್ದ 9 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಿದ ನಂತರ, ನಾಗ್ಪುರ ನಗರದಿಂದ ಸುಮಾರು 60 ಕಿಮೀ ದೂರದಲ್ಲಿರುವ ಉಮ್ರೆದ್ ಪಟ್ಟಣದಲ್ಲಿ ಜೂನ್ ತಿಂಗಳ ಮಧ್ಯ ಭಾಗದಿಂದ ಜುಲೈ ಮಧ್ಯಭಾಗದ ನಡುವೆ ನಡೆದಿದ್ದ ಸಾಮೂಹಿಕ ಅತ್ಯಾಚಾರವು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
11 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರದ ಆರೋಪದ ಮೇಲೆ ಉಮ್ರೆಡ್ ಪಟ್ಟಣದಲ್ಲಿ ಒಂಬತ್ತು ಜನರನ್ನು ಬಂಧಿಸಲಾಗಿದೆ. ಕೊಲೆ ಪ್ರಕರಣದ ತನಿಖೆಯ ವೇಳೆ ಈ ಮಾಹಿತಿ ಬಹಿರಂಗವಾಗಿದೆ ಎಂದು ನಾಗ್ಪುರ ಗ್ರಾಮಾಂತರ ಪೊಲೀಸ್ ಠಾಣೆಯ ಎಸ್ಡಿಪಿಒ ಪೂಜಾ ಗಾಯಕ್ವಾಡ್ ಅವರು ಹೇಳಿದ್ದಾರೆ.
ಜೂನ್ 19 ರಂದು ಅಪ್ರಾಪ್ತೆ ಮನೆಯ ಬಳಿ ವಾಸಿಸುವ ಕಾರ್ಗೋವಂಕರ್ ಬಾಲಕಿಯ ತಂದೆ ತಾಯಿ ಕೂಲಿ ಕೆಲಸಕ್ಕೆ ಹೋದ ಬಳಿಕ ಬಾಲಕಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ತನ್ನ ಸ್ನೇಹಿತ ಗಜಾನನ ಮುರ್ಸ್ಕರ್ (40) ಎಂಬಾತನ ಜೊತೆ ಸೇರಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾರೆ. ಘಟನೆಯ ಬಗ್ಗೆ ತಮಗೆ ತಿಳಿದಿಲ್ಲ ಎಂದು ಬಾಲಕಿಯ ಪೋಷಕರು ಹೇಳಿದ್ದಾರೆ.
ನಂತರ ಉಳಿದ ಆರೋಪಿಗಳು ಆಕೆಯ ಮೇಲೆ ಅತ್ಯಾಚಾರ ಮಾಡಲು ಶುರು ಮಾಡಿಕೊಂಡಿದ್ದಾರೆ. ಇದು ಒಂದು ತಿಂಗಳು ಮುಂದುವರೆದಿದೆ. ಆಕೆಗೆ ಸ್ಪಲ್ಪ ಹಣ ಕೊಟ್ಟು ಬೆದರಿಕೆ ಹಾಕಿ ಸುಮ್ಮನಾಗಿಸಿದ್ದಾರೆ. ಬಾಲಕಿಯನ್ನು ನಾಗ್ಪುರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಪರೀಕ್ಷೆ ಮಾಡಿಸಲಾಗಿದ್ದು, ಆಕೆಯ ಮೇಲೆ ಪದೇ ಪದೇ ಸಾಮೂಹಿಕ ಅತ್ಯಾಚಾರ ನಡೆದಿರುವುದನ್ನು ವರದಿ ದೃಢಪಡಿಸಿದೆ ಎಂದು ಪೊಲೀಸರು ತಿಳಿಸಿದರು.
ಉಳಿದ ಆರೋಪಿಗಳನ್ನು ಪ್ರೇಮದಾಸ್ ಗತಿಬಂಧೆ (38), ರಾಕೇಶ್ ಮಹಾಕಲ್ಕರ್ (24), ಗೋವಿಂದ ನಾಟೆ (22), ಸೌರಭ್ ಅಲಿಯಾಸ್ ಕರಣ್ ರಿಥೆ (22), ನಿತೇಶ್ ಫುಕಾಟ್ (30), ಪ್ರದುಮ್ನ ಕರುತ್ಕರ್ (22) ಮತ್ತು ನಿಖಿಲ್ ಅಲಿಯಾಸ್ ಪಿಂಕು ನರುಲೆ (24) ಎಂದು ಗುರುತಿಸಲಾಗಿದೆ.
ಎಲ್ಲಾ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 376 (ಡಿ) (ಗ್ಯಾಂಗ್ರೇಪ್) ಮತ್ತು ಪೋಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.