ನಾವು ಜ್ಯಾತ್ಯಾತೀತ ರಾಷ್ಟ್ರ, ದೇಶವನ್ನು ಧರ್ಮದ ಆಧಾರದಲ್ಲಿ ಒಡೆಯುವ ಯತ್ನ ಮಾಡಲಾಗುತ್ತಿದೆ ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಮಿಳುನಾಡಿನ ದೇವಸ್ಥಾನಗಳಲ್ಲಿ ಆಗಮ ಶಾಸ್ತçದಂತೆ ಭಕ್ತರಿಗೆ ವಸ್ತç ಸಂಹಿತೆ ಜಾರಿಗೊಳಿಸುವಂತೆ ಮತ್ತು ದೇವಸ್ಥಾನಗಳಿಗೆ ಹಿಂದೂಯೇತರರ ಪ್ರವೇಶಕ್ಕೆ ನಿರ್ಬಂಧ ಹೇರುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಅರ್ಜಿ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಮುನೀಶ್ವರ್ ನಾಥ್ ಭಂಡಾರಿ ಅಸಮಾಧಾನ ವ್ಯಕ್ತಪಡಿಸಿದರು.
`ಅತ್ಯಂತ ಮುಖ್ಯವಾಗಿರುವುದು ಯಾವುದು..? ದೇಶವೋ ಧರ್ಮವೋ..? ಕೆಲವರು ಹಿಜಬ್ ಪರವಾಗಿ ಕೆಲವರು ದೇವಸ್ಥಾನಗಳಲ್ಲಿ ಧೋತಿ ಪರವಾಗಿ. ಇದು ಒಂದೇ ದೇಶವೋ ಅಥವಾ ಧರ್ಮದ ಆಧಾರದಲ್ಲಿ ವಿಭಜಿಲ್ಪಟ್ಟಿದ್ಯಾ..?’ ಎಂದು ಮುಖ್ಯ ನ್ಯಾಯಮೂರ್ತಿಗಳು ಆತಂಕ ವ್ಯಕ್ತಪಡಿಸಿದರು.
`ನಮ್ಮದು ಜ್ಯಾತ್ಯಾತೀತ ರಾಷ್ಟ್ರ. ಧರ್ಮದ ಆಧಾರದಲ್ಲಿ ಈ ದೇಶವನ್ನು ಒಡೆಯುವ ಪ್ರಯತ್ನ ಮಾಡಲಾಗ್ತಿದೆ. ಕೇವಲ ಮೂಲಭೂತ ಹಕ್ಕುಗಳಿಗಷ್ಟೇ ಮಾತು ಸೀಮಿತವಾಗಿರಬಾರದು, ದೇಶಕ್ಕೆ ನಾಗರಿಕರು ಏನು ಕೊಡಬಹುದು ಮತ್ತು ಮೂಲಭೂತ ಕರ್ತವ್ಯಗಳು ಏನು ಎಂಬುದರ ಬಗ್ಗೆಯೂ ಮಾತುಗಳಾಗಬೇಕು’
ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದರು.